ಮನೆ ಬಿಟ್ಟು ಬಂದು ಓಡಿ ಹೋಗಿ ಮದುವೆ ಆಗಿದ್ದ ಯುವ ಪ್ರೇಮಿಗಳ ಶವ ರೈಲ್ವೆ ಹಳಿಯ ಮೇಲೆ ಪತ್ತೆ!
ನೆಲಮಂಗಲ-ಮನೆ ಬಿಟ್ಟು ಬಂದು ಓಡಿ ಹೋಗಿ ಮದುವೆ ಆಗಿದ್ದ ಯುವ ಪ್ರೇಮಿಗಳ ಶವ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ನಡೆದಿದೆ.
ಮೃತ ಯುವನನ್ನು ನಾಗೇಂದ್ರ (21) ಎಂದು ಗುರುತಿಸಲಾಗಿದೆ. ಯುವತಿಯ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಚಿಕ್ಕಬಾಣಾವರ ಮತ್ತು ಗೊಲ್ಲಹಳ್ಳಿ ರೈಲು ನಿಲ್ದಾಣಗಳ ನಡುವಿನ ಹುಸ್ಕೂರು ರೈಲ್ವೆ ನಿಲ್ದಾಣದಲ್ಲಿ ಇಬ್ಬರ ಶವ ಪತ್ತೆಯಾಗಿದೆ.
ಪರಸ್ಪರ ಪ್ರೀತಿಸ್ತಿದ್ದ ಯುವಕ– ಯುವತಿ ಮನೆ ಬಿಟ್ಟು ಬಂದು ಮದುವೆಯಾಗಿದ್ದರು ಎನ್ನಲಾಗಿದೆ. ಸದ್ಯ ಇವರ ಮೃತದೇಹ ರೈಲು ಹಳಿ ಬಳಿ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದು, ಚಲಿಸುವ ರೈಲಿಗೆ ಸಿಲುಕಿ ಇವರು ಆತ್ಮಹತ್ಯೆ ಮಾಡಿಕೊಂಡಿರಬೇಕು ಎನ್ನುವ ಶಂಕೆ ವ್ಯಕ್ತವಾಗಿದೆ.ಪೊಲೀಸರ ತನಿಖೆ ಇಂದ ಇನ್ನು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.