ಇಸ್ವತ್ತು ತಿದ್ದುಪಡಿಗಾಗಿ ಲಂಚ ಪಡೆಯುವಾಗ ಲೋಕಯುಕ್ತ ಬಲೆಗೆ ಬಿದ್ದ ಲಂಚಬಾಕ ಪಿಡಿಓ ಮತ್ತು ಕಡು ಭ್ರಷ್ಟ ಕಾರ್ಯದರ್ಶಿ
ಹೊಸದುರ್ಗ: ತಾಲೂಕಿನ ಕುರುಬರಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಬಸವರಾಜ ಮತ್ತು ಕಾರ್ಯದರ್ಶಿ ಜಗದೀಶ ಇಬ್ಬರೂ ಲೋಕಾಯುಕ್ತ ಬಲೆಗೆ ಬಿದ್ದ ಘಟನೆಯು ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕುರುಬರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸ್ನೇಹ ಬೇಕರಿಯ ಮಾಲೀಕ ಲೊಕೇಶ ಎನ್ನುವವರು ಮನೆಯನ್ನು ಕೆಡವಿ ಹೊಸದಾಗಿ ನಿರ್ಮಿಸಲು ಎಸ್ ಬಿ ಐ ಬ್ಯಾಂಕಿನಿಂದ ಸಾಲಪಡೆಯುವುದಕ್ಕೆ ನಿವೇಶನದ ಇ ಸ್ವತ್ತು ಕೇಳಿದ್ದಾರೆ. ಇದನ್ನು ಪಡೆಯಲು ಲೊಕೇಶ್ ಕುರುಬರಹಳ್ಳಿ ಪಂಚಾಯಿತಿಗೆ ಅರ್ಜಿಯನ್ನು ಸಲ್ಲಿಸಿದ್ದು, ಪಂಚಾಯಿತಿ ಪಿಡಿಓ ಬಸವರಾಜ್ ಇ ಸ್ವತ್ತು ನೀಡಲು ಐದಾರು ತಿಂಗಳು ಓಡಾಡಿಸಿ 10 ಸಾವಿರ ಲಂಚವನ್ನು ಕೇಳಿದ್ದು, ಲೊಕೇಶ್ ಲಂಚದ ಹಣ ಕೊಟ್ಟಿದ್ದರು. ಆದರೆ ಇ ಸ್ವತ್ತಿನಲ್ಲಿ ನಿವೇಶನ ಎನ್ನುವ ಬದಲು ಕಟ್ಟಡ ಎಂದು ನಮೂದಾಗಿತ್ತು. ಇದನ್ನು ಬದಲಾಯಿಸಿ ಕೊಂಡು ಬರಲು ಬ್ಯಾಂಕ್ ನವರು ಹೇಳಿದ್ದರು, ಅದರಂತೆ ಮತ್ತೆ ಕುರುಬರಹಳ್ಳಿ ಪಂಚಾಯಿತಿ ಗೆ ಬಂದು ಆಗಿರುವ ತಪ್ಪನ್ನು ಸರಿಪಡಿಸಿಕೊಡುವಂತೆ ಕೇಳಿದರೆ ಅದಕ್ಕೆ ಮತ್ತೆ 6 ಸಾವಿರ ಲಂಚ ಕೇಳಿದ್ದರು. ಲೊಕೇಶ್ ಲೋಕಾಯುಕ್ತ ಕಚೇರಿಗೆ ದೂರು ಕೊಟ್ಟಿದ್ದರು. ದೂರನ್ನು ಸ್ವೀಕರಿಸಿದ ಲೋಕಾಯುಕ್ತ ಪೊಲೀಸರು, ದಾಳಿ ನಡೆಸಿ 6 ಸಾವಿರ ಹಣ ಕೊಡುವ ಸಮಯದಲ್ಲಿ ಪಿಡಿಓ ಬಸವರಾಜ ಮತ್ತು ಜಗದೀಶ್ ಅವರನ್ನು ಬಂಧಿಸಿದ್ದಾರೆ.
ಅಪಾಧಿತ ಬಸವರಾಜ್ ನಿಂದ ಹಣವನ್ನು ಜಪ್ತಿ ಮಾಡಿದ್ದು, ಉಪಾಧೀಕ್ಷಕ ಮಂಜುನಾಥ್ ತನಿಖೆಯನ್ನು ಕೈಗೊಂಡಿದ್ದಾರೆ. ಲೋಕಾಯುಕ್ತ ಪೊಲೀಸ್ ನಿರೀಕ್ಷರಾದ ಲತಾ,ಶ್ರೀಮತಿ ಶಿಲ್ಪ, ಪೊಲೀಸ್ ಸಿಬ್ಬಂದಿಗಳಾದ ಜಿಎಂ ತಿಪ್ಪೇಸ್ವಾಮಿ, ಸಿಹೆಚ್ ಸಿಗಳಾದ ಶ್ರೀನಿವಾಸ, ಪುಷ್ಪ, ಕೆ ಟಿ ಮಾರುತಿ, ಸಿಪಿಸಿ ಮಾರುತಿ, ಸಂತೋಷ್ ಕುಮಾರ್, ವಿರೇಶ್, ಮಾರುತಿ, ಎಪಿಸಿ ವೆಂಕಟೇಶ್ ಕುಮಾರ್, ಟಿವಿ ಸಂತೋಷ್ ಇವರು ಈ ದಾಳಿಯ ಪ್ರಕರಣದಲ್ಲಿ ಬಾಗವಹಿಸಿದರು.