ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯ
ವಿಜಯಪುರ: ಖ್ಯಾತ ಪ್ರವಚನಕಾರರು, ನಡೆದಾಡುವ ದೇವರೆಂದೇ ಇಡೀ ಖ್ಯಾತರಾಗಿದ್ದ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀಗಳು, ಸುಮಾರು 1 ತಿಂಗಳಿಂದ ದ್ರವಾಹಾರವನ್ನೇ ಸೇವಿಸುತ್ತಿದ್ದರು. ಹೆಚ್ಚಿನ ಚಿಕಿತ್ಸೆ ಪಡೆಯಲು ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೈ ಮುಗಿದು ಬೇಡಿಕೊಂಡರೂ ಶ್ರೀಗಳು ನಿರಾಕರಿಸಿದ್ದರು. ನಿನ್ನೆ ಬೆಳಗ್ಗೆ ಪ್ರಧಾನಿ ಮೋದಿ ಸಹ ದೂರವಾಣಿ ಕರೆ ಮಾಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದರು.
ಇಂದು ಮಧ್ಯಾಹ್ನದವರೆಗೆ ಆರೋಗ್ಯ ವಿಚಾರಿಸಿದ ಗಣ್ಯರೆಲ್ಲರೂ ಶ್ರೀಗಳ ಆರೋಗ್ಯ ಸ್ಥಿರವಾಗಿದೆ ಎಂದಿದ್ದರು. ಆದರೆ ಇದೀಗ ಶ್ರೀಗಳು ಅಗಲಿರುವ ಸುದ್ದಿ ತಿಳಿದು ಭಕ್ತಾದಿಗಳು ಆಘಾತಕ್ಕೆ ಒಳಗಾಗಿದ್ದಾರೆ.