ಒಂಟಿ ಮಹಿಳೆಯನ್ನು ಸಜೀವವಾಗಿ ಸುಟ್ಟು ಹಾಕಿದ ಕೊಲೆಗಟುಕರು
ಮದ್ದೂರು- ಒಂಟಿ ಮಹಿಳೆ ಸಜೀವ ದಹನವಾಗಿ ರುವ ಘಟನೆ ಮಂಡ್ಯದ ಮಾರಸಿಂಗನಹಳ್ಳಿಯಲ್ಲಿ ತಡರಾತ್ರಿ ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದ ಪ್ರೇಮ (42) ಹತ್ಯೆಯಾದ ಮಹಿಳೆಯಾಗಿದ್ದಾಳೆ.
ಪತಿ ನಿಧನದ ಬಳಿಕ ಪ್ರೇಮ ಒಂಟಿಯಾಗಿದ್ದಳು. ಪ್ರೇಮ ಅವರ ಓರ್ವ ಪುತ್ರ ಬೆಂಗಳೂರಿನಲ್ಲಿ ವಾಸವಿದ್ದನು. ರಾತ್ರಿ ತಮ್ಮ ಮನೆಯಲ್ಲಿ ಒಂಟಿಯಾಗಿ ಮಲಗಿದ್ದಾಗ ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ. ಹಾಸಿಗೆಯಲ್ಲೆ ಪ್ರೇಮ ಸಂಪೂರ್ಣ ಸುಟ್ಟು ಭಸ್ಮವಾಗಿದ್ದಾಳೆ. ಈ ಸಂಬಂಧ ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ್ದ ಮಂಡ್ಯ ಎಸ್ಪಿ ಎನ್.ಯತೀಶ್ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಮನೆಯಲ್ಲಿ ಮಹಿಳೆಯೊಬ್ಬರ ಸುಟ್ಟ ದೇಹ ಪತ್ತೆಯಾಗಿದೆ. FSL ತಂಡ ತಂಡ ಭೇಟಿ ನೀಡಿ, ಸಾಕ್ಷ್ಯ ಕಲೆ ಹಾಕ್ತಿದ್ದಾರೆ. ಮೃತಳ ಪತಿ ಮೂರು ವರ್ಷದ ಹಿಂದೆ ಮೃತರಾಗಿದ್ದರು. ಮಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು.
ಮೃತ ಮಹಿಳೆ ಒಬ್ಬರೇ ಮನೆಯಲ್ಲಿ ವಾಸ ಇದ್ದರು.
ಬೆಳಿಗ್ಗೆ ಮನೆ ಒಳಗಿಂದ ಹೊಗೆ ಬರುತ್ತಿರೋದನ್ನು ಸ್ಥಳೀಯರು ನೋಡಿದ್ದಾರೆ. ಮನೆಯಲ್ಲಿದ್ದ 80 ರಿಂದ 100 ಗ್ರಾಂ ಚಿನ್ನಾಭರಣ, ಬೆಳ್ಳಿ ಆಭರಣ, ಲ್ಯಾಪ್ ಟಾಪ್ ಕಳುವಾಗಿದೆ ಎಂದು ಮಗ ಹೇಳುತ್ತಿದ್ದಾರೆ. ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.