ಬಡಪಾಯಿ ಸಾಮಾನ್ಯಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಆಲೂರು ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಮೋಹನ ಕುಮಾರ- ಪ್ರಕರಣ ದಾಖಲು
ಆಲೂರು-ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊರ್ವನ ಮೇಲೆ ಮತೊರ್ವ ವ್ಯಕ್ತಿ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಶಾಂಭವಿ ಕಲ್ಯಾಣ ಮಂಟಪದಲ್ಲಿ ನಡೆದಿದೆ
ಜಗದೀಶ್ ಎಂಬುವವರೇ ಮಾರಣಾಂತಿಕ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ,
ಶಾಂಭವಿ ಕಲ್ಯಾಣ ಮಂಟಪದಲ್ಲಿ ಕಳೆದ ಎರಡು ದಿನಗಳ ಹಿಂದೆ ಮದುವೆ ಸಮಾರಂಭ ಒಂದರಲ್ಲಿ ಮೋಹನ್ ಮತ್ತು ಜಗದೀಶ್ ಪರಸ್ಪರ ಎದುರುಗೊಂಡಿದ್ದು, ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬಣ್ಣ ಬಳಿಯುವ ವಿಷಯದಲ್ಲಿ ಜಗದೀಶರೊಂದಿಗೆ ಕ್ಯಾತೆ ತೆಗೆದ ಮೋಹನ್ ದೇವಸ್ಥಾನದ ವಿಷಯದಲ್ಲಿ ತಕರಾರು ತೆಗೆದು ಅವಾಸ್ತವಿಕ ಶಬ್ದಗಳಿಂದು ಬೈದು ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುತ್ತಾರೆ.ಇಬ್ಬರು ಬಿಜೆಪಿ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದು,ಆಲೂರ್ ಪೊಲೀಸ್ ಠಾಣೆ ವ್ಯಾಪ್ತಿಯ ಶಾಂಭವಿ ಕಲ್ಯಾಣ ಮಂಟಪದಲ್ಲಿ ಬಡಪಾಯಿ ಬಿಜೆಪಿ ಕಾರ್ಯಕರ್ತನ ಮೇಲೆ ಆಲೂರು ಮಂಡಲ ಬಿಜೆಪಿ ಓಬಿಸಿ ಅಧ್ಯಕ್ಷ ಮೋಹನ್ ಕುಮಾರ್ ತೊಗರನಹಳ್ಳಿ ಹಾಗೂ ಶಿವಣ್ಣ ಎಂಬುವರು ಹಲ್ಲೆ ಮಾಡಿದ್ದು ಅವರ ಮೇಲೆ ಆಲೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 307 ಹಾಗೂ 5 04 ರ ಅಡಿ ಎಫ್ ಆರ್ ದಾಖಲಾಗಿರುತ್ತದೆ.
ಈ ಬಗ್ಗೆ ಪ್ರಕರಣ ಅಲೂರು ಪಟ್ಟಣ
ಪೊಲೀಸ ಠಾಣೆಯಲ್ಲಿ ದಾಖಲಾಗಿದೆ..