ಮಡಿಕೇರಿ ರೆಸಾರ್ಟ್‌ನಲ್ಲಿ ತಂದೆ , ಮಗಳು ಮತ್ತು ತಾಯಿ ಆತ್ಮಹತ್ಯೆ
ಮಡಿಕೇರಿ: ರೆಸಾರ್ಟ್‌ನಲ್ಲಿ ದಂಪತಿ ಮತ್ತು ಅವರ 11 ವರ್ಷದ ಮಗಳು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗಿನಲ್ಲಿ ನಡೆದಿದೆ.
ಕುಟುಂಬವು ತೀವ್ರ ಸ್ವರೂಪದ ಆರ್ಥಿಕ ತೊಂದರೆಯನ್ನು ಎದುರಿಸುತ್ತಿತ್ತು ಎಂದು (SUICIDE NOTE ) ಆತ್ಮಹತ್ಯೆ ಟಿಪ್ಪಣಿಯಲ್ಲಿ ಬರೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿನೋದ್ (43), ಪತ್ನಿ ಜುಬಿ ಅಬ್ರಹಾಂ (37) ಮತ್ತು ಪುತ್ರಿ ಜೋಹಾನ್ (11) ಅವರ ಶವಗಳು ಖಾಸಗಿ ರೆಸಾರ್ಟ್‌ನ ಕೋಣೆಯಲ್ಲಿ ಪತ್ತೆಯಾಗಿವೆ.
ಅವರು ಕೇರಳದ ಕೊಟ್ಟಾಯಂ ನಿವಾಸಿಗಳಾಗಿದ್ದು,ಪ್ರವಾಸಿಗರಿಂದ ಜನಪ್ರಿಯವಾಗಿರುವ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶದ ರೆಸಾರ್ಟ್‌ನಲ್ಲಿ ಕುಟುಂಬ ಶನಿವಾರ ಬಂದು ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳನ್ನು ಕೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಕುಟುಂಬದ ಸಂಬಂಧಿಕರನ್ನು ಸಂಪರ್ಕಿಸಿದ್ದು, ಅವರು ಕೊಡಗಿಗೆ ಬಂದಿಳಿದಿದ್ದಾರೆ ಎಂದು ತಿಳಿದುಬಂದಿದೆ.