ಅನ್ಯ ಕೋಮಿನ ಯುವಕನನ್ನು ಪ್ರೀತಿಸಿದಕ್ಕೆ ತಂದೆಯಿಂದಲೇ ಮಗಳ ಕೊಲೆ
ಬಳ್ಳಾರಿ-ಅನ್ಯ ಕೋಮಿನ ಯುವಕನನ್ನು ಪ್ರೀತಿಸಿದ ಮಗಳನ್ನು ಕಾಲುವೆಗೆ ತಳ್ಳಿ ಹಾಕಿರುವ ಘಟನೆ ಕುಡುತಿನಿ ಪಟ್ಟಣದ ಸಿದ್ದಮ್ಮನಹಳ್ಳಿ ಬಳಿ ತುಂಗಭದ್ರ ಹೆಚ್‌ಎಲ್‌ಸಿ ಕಾಲುವೆಯಲ್ಲಿ ನಡೆದಿದೆ.
ಕುಡುತಿನಿ ಬುಡ್ಗ ಜಂಗಮ ಕಾಲೋನಿ ನಿವಾಸಿ ಓಂಕಾರಗೌಡ ಅ.31ರಂದು ಮಗಳನ್ನು ಕಾಲುವೆಗೆ ತಳ್ಳಿ ಹಾಕಿದ್ದಾನೆ.
ಘಟನೆ ನಡೆದ ದಿನ ಮಧ್ಯಾಹ್ನ ಮಗಳನ್ನು ಸಿನಿಮಾ ತೋರಿಸುವುದಾಗಿ ಓಂಕಾರಗೌಡ ಬೈಕ್‌ನಲ್ಲಿ ಮನೆಯಿಂದ ಕರೆದುಕೊಂಡು ಬಂದು ಹೋಟೆಲ್ಗೆ ಹೋಗಿ ಮಗಳಿಗೆ ತಿಂಡಿ ತಿನ್ನಿಸಿ,ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿಸಿದ್ದಾನೆ.
ಬಳಿಕ ಆಭರಣದ ಅಂಗಡಿಗೆ ಕರೆದುಕೊಂಡು ಹೋಗಿ ಒಂದು ಜತೆ ಓಲೆ,ಉಂಗುರವನ್ನು ಮಗಳಿಗೆ ಕೊಡಿಸಿದ್ದಾನೆ.ಅಲ್ಲಿಂದ ನೇರವಾಗಿ ಹೆಚ್‌ಎಲ್‌ಸಿ ಕಾಲುವೆ ಬಳಿಗೆ ಮಗಳನ್ನು ಕರೆತಂದು ಹಿಂದಿನಿಂದ ಬಾಲಕಿಯನ್ನು ಕಾಲುವೆಗೆ ತಳ್ಳಿ ಹಾಕಿದ್ದಾನೆ.
ಘಟನೆ ಬಳಿಕ ಆರೋಪಿ ತಿರುಪತಿಗೆ ತೆರಳಿದ್ದಾನೆ. ತಿರುಪತಿಯ ದರ್ಶನ ಮುಗಿಸಿ ವಾಪಾಸ್ಸು ಬರುವಾಗ ಆತನಿಗೆ ಪೊಲೀಸರು ಬಂಧಿಸಿದ್ದಾರೆ.