ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ ಇಲ್ಲಿ ಎಲ್ಲ ಬದಲಾವಣೆಯನ್ನ ಹೈಕಮಾಂಡ ಮಾಡುತ್ತದೆ – ಮಾಜಿ ಶಾಸಕ ಮಂಕಾಳ ವೈದ್ಯ
ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ವೆಂಕಟೇಶ್ ನಾಯ್ಕ ಅಧಿಕಾರ ಸ್ವೀಕಾರ
ಭಟ್ಕಳ-ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ ಇಲ್ಲಿ ಎಲ್ಲ ಬದಲಾವಣೆಯನ್ನ ಹೈಕಮಾಂಡ ಮಾಡುತ್ತದೆ ವಿನ: ಮಂಕಾಳ್ ವೈದ್ಯ ಮಾಡೋದಲ್ಲ ಎನ್ನುವ ಸಂದೇಶವನ್ನ ಮಾಜಿ ಶಾಸಕ ಕಾಂಗ್ರೆಸ್ಸಿನ ಪ್ರಭಾವಿ ನಾಯಕರಾದ ಸನ್ಮಾನ್ಯ ಮಂಕಾಳ್ ವೈದ್ಯರವರು ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ತಿಳಿಸಿದರು.
ಅವರು ಗುರುವಾರದಂದು ಶಿರಾಲಿಯ ಹಳೆಕೋಟೆ ಹನುಮಂತ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ ಭಟ್ಕಳ ಬ್ಲಾಕ್ ಕಾಂಗ್ರೆಸ್ಸಿನ ನೂತನ ಅಧ್ಯಕ್ಷ ವೆಂಕಟೇಶ್ ನಾಯ್ಕ ಅವರ ಪದಗ್ರಹಣದ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಹಿಂದಿನ ಅಧ್ಯಕ್ಷರಾದ ಸಂತೋಷ ನಾಯ್ಕರು ಉತ್ತಮ ಕೆಲಸ ಮಾಡಿದ್ದಾರೆ ಹೀಗಾಗಿ ನಾನು ಅವರನ್ನ ಅಭಿನಂದಿಸುತ್ತೇನೆ ಮತ್ತು ನೂತನ ಅಧ್ಯಕ್ಷರನ್ನ ಸ್ವಾಗತಿಸುತ್ತೇನೆಂದರು. ಹಾಲಿ ಅಧ್ಯಕ್ಷರಾದ ವೆಂಕಟೇಶ ನಾಯ್ಕರ ತಂದೆ ನಾರಾಯಣ ನಾಯ್ಕರು 25 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ದುಡಿದಿದ್ದಾರೆ ಅವರ ಮಗ ಕೆ.ಎನ್.ನಾಯ್ಕ ಪಕ್ಷದ ಅಧ್ಯಕ್ಷರಾಗಿ ದುಡಿದಿದ್ದಾರೆ. ಅವರ ಮಗ ದಿ.ಕಿಶೋರ ನಾಯ್ಕರ ಕೊಡುಗೆ ಪಕ್ಷಕ್ಕಿದೆ ಅಂತಹ ಕಾಂಗ್ರೆಸ್ಸಿನ ಇತಿಹಾಸವಿರುವ ಕುಟುಂಬದ ಸದಸ್ಯನನ್ನ ಕಾಂಗ್ರೆಸ್ಸಿನ ಕಾರ್ಯಕರ್ತರೇ ಆಯ್ಕೆಮಾಡಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು. ಇದೆ ಸಂದರ್ಭದಲ್ಲಿ ಸಂತೋಷ ನಾಯ್ಕರ ಕುಟುಂಬವೆ ಬೇರೆ ವೆಂಕಟೇಶ ನಾಯ್ಕರ ಕುಟುಂಬವೇ ಬೇರೆ ಬೇರೆ ಎನ್ನುವ ಸ್ಪಷ್ಟನೆಯನ್ನ ನೀಡಿದರು. ಸಮಾರಂಭವನ್ನು ಉದ್ಘಾಟಿಸಿದ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ಭೀಮಣ್ಣ ನಾಯ್ಕರವರು ಮಾತನಾಡಿ ಭಟ್ಕಳ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಶಕ್ತಿ ನೀಡುವ ಉದ್ದೇಶದಿಂದ ಹೊಸ ಅಧ್ಯಕ್ಷರನ್ನ ನೇಮಕ ಮಾಡಲಾಗಿದೆ,ಹಿಂದಿನ ಅಧ್ಯಕ್ಷರು ಕೂಡ ಉತ್ತಮ ಕೆಲಸ ಮಾಡಿದ್ದಾರೆ, ಆದರೆ ಪಕ್ಷ ಸಂಘಟಿಸುವ ಅವಕಾಶವನ್ನು ಉಳಿದ ನಿಷ್ಠಾವಂತ ಕಾರ್ಯಕರ್ತರಿಗೂ ನೀಡಬೇಕಾಗುತ್ತದೆ, ಕೆಪಿಸಿಸಿ ಅಧ್ಯಕ್ಷರ ಆದೇಶವನ್ನ ಜಾರಿಗೊಳಿಸುವುದು ಜಿಲ್ಲಾಧ್ಯಕ್ಷರ ಕರ್ತವ್ಯವಾಗಿದೆ ಎನ್ನುವ ಅಭಿಪ್ರಾಯವನ್ನ ವ್ಯಕ್ತಪಡಿಸಿದರು. ಮಾಜಿ ಸಚಿವರಾದ ಸನ್ಮಾನ್ಯ ಆರ್.ಎನ್.ನಾಯ್ಕ, ಜಿಲ್ಲಾ ಕಾಂಗ್ರೆಸ್ ಪ್ರ.ಕಾ.ಎಸ್.ಕೆ.ಭಾಗವತ, ಭಟ್ಕಳ ಬ್ಲಾಕ್ ಕಾಂಗ್ರೆಸ್ಸಿನ ನೂತನ ಅಧ್ಯಕ್ಷರಾದ ವೆಂಕಟೇಶ ನಾಯ್ಕರವರು ಮಾತನಾಡಿದರು. ಅಲ್ಪ.ಸಂ.ಅಧ್ಯಕ್ಷರಾದ ಅಬ್ದುಲ್ ಮಜೀದ, ಜಿಲ್ಲಾ ಪಂ. ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ತಾ.ಪಂ.ಮಾಜಿ ಅಧ್ಯಕ್ಷ ಈಶ್ವರ ನಾಯ್ಕ, ಮಂಕಿಯ ಚಂದ್ರುಗೌಡ, ನಾಮಧಾರಿ ಮುಖಂಡ ವಾಮನ ನಾಯ್ಕ, ಶಿರಾಲಿ ಗ್ರಾಮ ಪಂ ಅಧ್ಯಕ್ಷೆ ರೇವತಿ ನಾಯ್ಕ, ಬೆಂಗ್ರೆ ಗ್ರಾಮ ಪಂ.ಅಧ್ಯಕ್ಷೆ ಬೇಬಿ ನಾಯ್ಕ, ಹಿರಿಯ ಕಾಂಗ್ರೆಸ್ ಮುಖಂಡ ವೆಂಕ್ಟಯ್ಯ ಭೈರುಮನೆ,ಸೋಮಯ್ಯ ಗೊಂಡ,ಫರ್ಜಾನ ಸೌದಾಗರ,ಅಲ್ಬರ್ಟ ಡಿಕೋಸ್ತ, ಸಿಂಧು ನಾಯ್ಕ, ವಿಠ್ಠಲ ನಾಯ್ಕರವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಆರಂಭದಲ್ಲಿ ಸೇವಾದಳದ ಅಧ್ಯಕ್ಷರಾದ ರಾಜೇಶ ನಾಯ್ಕ ಅತಿಥಿಗಳನ್ನ ಸ್ವಾಗತಿಸಿದರೆ ಕೊನೆಯಲ್ಲಿ ಹಿ.ವರ್ಗದ ಅಧ್ಯಕ್ಷ ವಿಷ್ಣು ದೇವಡಿಗ ವಂದಿಸಿದರು.