ಬಟ್ಟೆ ಹೊಲಿಯಲು ಟೇಲರ್ ಅಂಗಡಿಗೆ ಕೊಟ್ಟು ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದ 19 ವರ್ಷದ ಯುವತಿಯೊಬ್ಬಳು ಮರಳಿ ಮನೆಗೆ ಬಾರದೇ ನಾಪತ್ತೆ
ಉಡುಪಿ-ಬಟ್ಟೆ ಹೊಲಿಯಲು ಕೊಟ್ಟು ಬರುವುದಾಗಿ ಹೇಳಿ ತೆರಳಿದ್ದ ಯುವತಿಯೊಬ್ಬಳು ಮರಳಿ ಬಾರದೇ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಬಡಗು ಬೆಟ್ಟುವಿನ ಇಂದಿರಾ ನಗರದಲ್ಲಿರುವ ಅಜ್ಜಿ ಮನೆಯಿಂದ ನಿಖಿತಾ(19) ನ.28ರಂದು ಹೋಗಿದ್ದು, ಈವರೆಗೆ ವಾಪಸ್ಸು ಬಾದರೆ ನಾಪತ್ತೆಯಾಗಿದ್ದಾರೆ.
ಸಪೂರ ಶರೀರ, ಗೋದಿ ಮೈಬಣ್ಣ ಹೊಂದಿರುವ ಈಕೆ, ನಾಪತ್ತೆಯಾದ ವೇಳೆ ಪಿಂಕ್ ಚೂಡಿದಾರದ ಟಾಪ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು.
ಇವರು ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.