ಮಂಗಳೂರಿನಲ್ಲಿ ತಡರಾತ್ರಿ ಹಿಂದೂ-ಮುಸ್ಲಿಂ ಯುವ ಜೋಡಿ ಸುತ್ತಾಟ,
ಬಿಸಿ ಮುಟ್ಟಿಸಿ ತರಾಟೆಗೆ ತೆಗೆದುಕೊಂಡ ಹಿಂದೂ ಸಂಘಟನೆ ಕಾರ್ಯಕರ್ತರು
ಮಂಗಳೂರು: ಮಂಗಳೂರಿನಲ್ಲಿ ಮತ್ತೆ ಬಜರಂಗದಳದ ಕಾರ್ಯಕರ್ತರ ಕೈಗೆ ಅನ್ಯಕೋಮಿನ ಜೋಡಿ ಸಿಕ್ಕಿಬಿದ್ದ ಘಟನೆ ತಡರಾತ್ರಿ ಕೊಟ್ಟಾರ ಬಳಿ ನಡೆದಿದೆ.
ಮುಸ್ಲಿಂ ಯುವಕರ ಜೊತೆ ಹಿಂದೂ ಯುವತಿಯರು ಸುತ್ತಾಡುವುದನ್ನು ಕಂಡ ಕಾರ್ಯಕರ್ತರು ಬಿಸಿ ಮುಟ್ಡಿಸಿದ್ದಾರೆ ಎನ್ನಲಾಗಿದೆ.
ಮಂಗಳೂರು ನಗರದ ಕೊಟ್ಟಾರ ಎಂಬಲ್ಲಿ ಈ ಘಟನೆ ನಡೆದಿದ್ದು, ರಾತ್ರಿ 12 ಗಂಟೆ ಸುಮಾರಿಗೆ ಮುಸ್ಲಿಂ ಯುವಕರ ಜೊತೆ ಹಿಂದೂ ಯುವತಿಯರು ಸುತ್ತಾಡುತ್ತಿದ್ದರು, ಈ ವೇಳೆ ಕೊಟ್ಟಾರ ಬಳಿ ತಡೆದ ಬಜರಂಗದಳದ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದಾರೆ.
ಬಜರಂಗದಳದ ಕಾರ್ಯಕರ್ತರು ತಡೆದು ನಿಲ್ಲಿಸಿದಾಗ ಜೋಡಿಗಳು ಹೊಟೇಲ್ ಗೆ ಊಟಕ್ಕೆ ಬಂದಿರೋದಾಗಿ ಹೇಳಿದ್ದಾರೆ. ಮಧ್ಯರಾತ್ರಿ ಯಾವ ಹೊಟೇಲ್ ಇದೆ ಅಂತ ಹೇಳಿ ಹಲ್ಲೆಗೆ ಯತ್ನಿಸಿದ್ದಾರೆ. ಪೊಲೀಸರ ಮಧ್ಯ ಪ್ರವೇಶದ ಬಳಿಕ ಪರಿಸ್ಥಿತಿ ತಿಳಿಯಾಗಿದೆ, ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.