ಹೃದಯಾಘಾತದಿಂದ ಮಹಿಳೆ ಸಾವು
ಕೋಟ -ಯುವತಿಯೋರ್ವಳು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೋಟ ಪಡುಕರೆಯಲ್ಲಿ ನಡೆದಿದೆ.
ಮೃತಪಟ್ಟಿರುವ ಯುವತಿ ಕೋಟ ಪಡುಕರೆ ನಿವಾಸಿ ಭವ್ಯ ಎಂದು ಗುರುತಿಸಲಾಗಿದೆ.
ಕೋಟ ಪಡುಕರೆ ಖಾಸಗಿ ಮೀನು ಸಂಸ್ಕರಣಾ ಫ್ಯಾಕ್ಟರಿಯಲ್ಲಿ ಕಛೇರಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಂಗಳವಾರ ಬೆಳಿಗ್ಗೆ ಮನೆಯಲ್ಲೇ ಹೃದಯಘಾತದಿಂದ ಮೃತಪಟ್ಟಿರುತ್ತಾರೆ.
ಮೃತರು ಪತಿ , ಸಹೋದರ, ತಂದೆ, ತಾಯಿ ಕುಟುಂಬಿಕರನ್ನು ಅಗಲಿದ್ದಾರೆ.