ಮಂಗಳೂರು ಸಮುದ್ರದಲ್ಲಿ ಈಜಲು ತೆರಳಿದ 18 ವರುಷದ ಯುವಕ ಸತ್ಯಂ ಸಮುದ್ರಪಾಲು
ಮಂಗಳೂರು-ಈಜಲು ತೆರಳಿದ ಯುವಕ ನೀರುಪಾಲಾಗಿರುವ ಘಟನೆ ಸುರತ್ಕಲ್ ಸಮೀಪದ ಲೈಟ್ ಹೌಸ್ ಬೀಚ್ ನಲ್ಲಿ ನಡೆದಿದೆ.
ಕಾನ ನಿವಾಸಿ ಸತ್ಯಂ (18) ಸಮುದ್ರದಲ್ಲಿ ನಾಪತ್ತೆಯಾಗಿರುವ ಯುವಕ.
ಶನಿವಾರ ಗೆಳೆಯ ಪ್ರಭಾಕರನ್ ಜೊತೆ ಸತ್ಯಂ ಸುರತ್ಕಲ್ ಲೈಟ್ ಹೌಸ್ ಬಳಿಯ ಸಮುದ್ರ ತೀರಕ್ಕೆ ತೆರಳಿದ್ದು ಇಬ್ಬರು ನೀರಿಗಿಳಿದಿದ್ದರು.
ಈ ವೇಳೆ ಸತ್ಯಂ ನೀರಿನ ಸೆಳೆತಕ್ಕೆ ಸಿಲುಕಿ ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮೀನುಗಾರರು ಯುವಕನಿಗೆ ಹುಡುಕಾಟ ನಡೆಸುತ್ತಿದ್ದಾರೆ.