ಬೈಕ್ ಹಾಗೂ ಶಾಲಾ ಬಸ್ಸು ಮಧ್ಯೆ ಭೀಕರ ಅಪಘಾತ- ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು
ಮಂಜೇಶ್ವರ – ಬೈಕ್ ಹಾಗೂ ಶಾಲಾ ಬಸ್ಸು ಮಧ್ಯೆ ಉಂಟಾದ ಭೀಕರ ಅಪಘಾತದಲ್ಲಿ ಮಂಗಳೂರು ಕಾಲೇಜಿನ ಇಬ್ಬರು ಪದವಿ ಕಾಲೇಜಿನ ವಿದ್ಯಾರ್ಥಿಗಳು ಮೃತಪಟ್ಟ ದಾರುಣ ಘಟನೆ ಇಂದು (ಡಿ 13 ) ಬೆಳಿಗ್ಗೆ ಮಂಜೇಶ್ವರ ಸಮೀಪದ ಮಿಯಪದವಿನಲ್ಲಿ ನಡೆದಿದೆ
ಮೃತಪಟ್ಟವರನ್ನು ಮಿಯಾಪದವು ದರ್ಬೆಯ ಹರೀಶ್ ರವರ ಪುತ್ರ ಪ್ರೀತೇಶ್ ಶೆಟ್ಟಿ ( 19) ಮತ್ತು ಬೆಜ್ಜಂಗಳ ಸುರೇಶ್ ರವರ ಪುತ್ರ ಅಭಿಷೇಕ್ ಎಂ .(19) ಮೃತ ಪಟ್ಟವರು.ಪ್ರೀತೇಶ್ ಮಂಗಳೂರಿನ ದೇವಿ ಕಾಲೇಜು ಹಾಗೂ ಅಭಿಷೇಕ್ ಪ್ರೇರಣಾ ಕಾಲೇಜಿನ ಡಿಗ್ರಿ ವಿದ್ಯಾರ್ಥಿ ಗಳಾಗಿದ್ದರು.
ಮಿಯಪದವು ಸಮೀಪದ ಬಾಳಿಯೂರು ಎಂಬಲ್ಲಿ ಈ ಅಪಘಾತ ನಡೆದಿದೆ. ವಿದ್ಯಾರ್ಥಿಗಳು ಬೈಕ್ ನಲ್ಲಿ ಕಾಲೇಜಿಗೆ ತೆರಳುತ್ತಿದ್ದಾಗ ಎದುರಿನಿಂದ ಬಂದ ಖಾಸಗಿ ಶಾಲೆಯ ಬಸ್ಸು ನಡುವೆ ಮುಖಾಮುಖಿ ಅಪಘಾತ ನಡೆದಿದೆ ಎಂದು ಹೇಳಲಾಗಿದೆ. ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದು, ಮಂಜೇಶ್ವರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ.