ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ಘಟಕದ ರಾಜ್ಯ ಆರ್ಗನೈಸಿಂಗ್ ಕಾರ್ಯದರ್ಶಿ ಆಯ್ಕೆ ಆದ ಕೆ.ಎಂ.ಷರೀಫ್ ಅವರಿಗೆ ಭಟ್ಕಳದ ಗುಲ್ಮಿ ಘಟಕದ ಸುನ್ನಿ ಸ್ಟುಡೆಂಟ್ ಫೆಡೆರೇಷನ್ ಅವರಿಂದ ಸನ್ಮಾನ
ಭಟ್ಕಳ- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ಘಟಕದ ರಾಜ್ಯ ಆರ್ಗನೈಸಿಂಗ್ ಕಾರ್ಯದರ್ಶಿ ಆಯ್ಕೆ ಆದ ಕೆ.ಎಂ.ಷರೀಫ್ ಅವರಿಗೆ ಶುಕ್ರವಾರ ಸಂಜೆ ಸುನ್ನಿ ಸ್ಟುಡೆಂಟ್ ಫೆಡೆರೇಷನ್
ಗುಲ್ಮಿ ಘಟಕದ ಪದಾಧಿಕಾರಿಗಳು ಭೇಟಿಯಾಗಿ ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದರು.ಈ ಸಂದರ್ಭದಲ್ಲಿ ಹಮೀದ್ ಖಾಝಿ, ಮೊಯಿನ ಮೌಲಾನ, ಆರೀಫ್ ಖಾನ್, ಅಲ್ತಾಫ್, ಸಯ್ಯದ್ ದಸ್ತಗಿರಿ,ಮೊಹಮ್ಮದ್ ಮುಸ್ತಫ್ ಮುಂತಾದವರು ಉಪಸ್ಥಿತರಿದ್ದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ಘಟಕದ ರಾಜ್ಯ ಆರ್ಗನೈಸಿಂಗ್ ಕಾರ್ಯದರ್ಶಿ ಆಗಿ ಭಟ್ಕಳದ ಕೆ.ಎಂ.ಷರೀಫ್ ಅವರನ್ನು ಆಯ್ಕೆ ಮಾಡಿ ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಅಧ್ಯಕ್ಷರು , ವಿಧಾನ ಪರಿಷತ್ ಸದಸ್ಯರು ಆದ ಕೆ.ಅಬ್ದುಲ್ ಜಬ್ಬಾರ್ ಅವರು ಆದೇಶ ಹೊರಡಿಸಿದ್ದರು. ಪ್ರಸ್ತುತ ಕೆ.ಎಂ ಷರೀಫ್ ಅವರು ಉತ್ತರ ಕನ್ನಡ ಸುನ್ನಿ ಯುವ ಜನ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಸುನ್ನಿ ಸ್ಟುಡೆಂಟ್ ಫೆಡೆರೇಷನ್ ಗುಲ್ಮಿ ಘಟಕದ ಪದಾಧಿಕಾರಿಗಳು ಕೆ.ಎಂ.ಷರೀಫ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.