ಭಟ್ಕಳ-ಭಟ್ಕಳ ತಾಲ್ಲೂಕಿನ ಯುವಕನೊರ್ವ ತನ್ನ ಮನೆಯ ಮೇಲೆ ಛಾವಣಿಗೆ ನೇಣು ಬಿಗಿದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಹನುಮಾನ್ ನಗರದಲ್ಲಿ ನಡೆದಿದೆ.
ಮೃತ ಯುವಕ ಈಶ್ವರ ಮಂಜುನಾಥ ನಾಯ್ಕ 24 ವರ್ಷ ಎಂದು ತಿಳಿದು ಬಂದಿದೆ. ಈತ ಹನುಮಾನ ನಗರ ಬೇಕರಿಯೊಂದರಲ್ಲಿ ಉದ್ಯೋಗಿಯಾಗಿದ್ದು ಬೆಳಗ್ಗೆ ಹತ್ತು ಗಂಟೆಗೂ ಮುನ್ನವೇ ಬೇಕರಿಯ ಮತ್ತೊಬ್ಬ ನೌಕರನೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಸ್ವಲ್ಪ ಸಮಯದ ನಂತರ ಬೇಕರಿಗೆ ಬರುವುದಾಗಿ ತಿಳಿಸಿದ್ದು,ಬೆಳಗ್ಗೆ ಹತ್ತು ಗಂಟೆಗೆ ಮತ್ತೆ ಕರೆ ಮಾಡಿದಾಗ ಯಾರೂ ಇರಲಿಲ್ಲ,ಪ್ರತಿಕ್ರಿಯೆ ಬಳಿಕ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ,
ಮೃತ ಈಶ್ವರನಿಗೆ ಇಬ್ಬರು ಸಹೋದರಿಯರಿದ್ದು ಇಬ್ಬವರಲ್ಲಿ ಅಕ್ಕನಿಗೆ ಮದುವೆಯಾಗಿದ್ದು ತಂದೆ-ತಾಯಿ ಹಾಗೂ ತಂಗಿಯೊAದಿಗೆ ಮನೆಯಲ್ಲಿ ವಾಸವಿದ್ದು,ಈ ಘಟನೆ ವೇಳೆ ಯಾರೂ ಇರಲಿಲ್ಲ ಎನ್ನಲಾಗಿದೆ.
ಈ ಬಗ್ಗೆ ನಗರ ಠಾಣೆಯಲ್ಲಿ ಮೃತನ ಮಾವ ಮಾದೇವ ನಾಯ್ಕ ದೂರು ನೀಡಿದ್ದು ದೂರನ್ನು ದಾಖಲಿಸಿ ಕೊಂಡ ಎ.ಎಸ್.ಐ ಗೋಪಾಲ್ ನಾಯಕ ತನಿಖೆ ಕೈ ಕೊಂಡಿದ್ದಾರೆ.