ಹಡಿಲು ಭೂಮಿ ಕೃಷಿ ಮಾಡಲು ಕೃಷಿ ಭೂಮಿ ನೀಡಿದ ಭೂ ಮಾಲಕರಿಗೆ ಉಡುಪಿ ಕೇದಾರ ಕಜೆ ಕುಚ್ಚಲಕ್ಕಿ ಶಾಸಕ ರಘುಪತಿ ಭಟ್ ವಿತರಣೆ
ಉಡುಪಿ: ಕರ್ನಾಟಕ ಸರ್ಕಾರ, ಕೃಷಿ ಇಲಾಖೆ ಹಾಗೂ ಸ್ಕೊಡ್ವೆಸ್ ಸಂಸ್ಥೆ ಸಹಯೋಗದಲ್ಲಿ ರಚಿತವಾದ ಕುಂದಾಪುರದ ಕೇದಾರೊತ್ಥನಾ ರೈತ ಉತ್ಪಾದಕರ ಕಂಪನಿಯಲ್ಲಿ ಕುಚ್ಚಲಕ್ಕಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್ ಕುಚ್ಚಲಕ್ಕಿ ವಿತರಣೆ ಮಾಡಿ ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ ಮೂಲಕ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಡಿಲು ಭೂಮಿಯಲ್ಲಿ ಸಾವಯವ ಕೃಷಿ ಮಾಡಲಾಗಿದ್ದು, ಈ ಕೃಷಿ ಕರ್ಯಕ್ಕೆ ಕೃಷಿ ಭೂಮಿಯನ್ನು ನೀಡಿದ ಕಡೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಭೂ ಮಾಲಕರಿಗೆ ಕೃತಜ್ಞತಾ ಪರ್ವಕವಾಗಿ ಉಡುಪಿ ಕೇದಾರ ಕಜೆ ಕುಚ್ಚಲಕ್ಕಿಯನ್ನು ನೀಡಲಾಯಿತು.*
ಅಧ್ಯಕ್ಷರಾದ ಶ್ರೀ ಕೆ. ರಘುಪತಿ ಭಟ್ ಅವರು ಭೂ ಮಾಲಕರಿಗೆ ಕೇದಾರಕಜೆ ಕುಚ್ಚಲಕ್ಕಿ ವಿತರಿಸಿ ಹಡಿಲು ಭೂಮಿ ಕೃಷಿಗೆ ಭೂಮಿಯನ್ನು ನೀಡಿದ ಭೂ ಮಾಲಕರಿಗೆ ಅಭಿನಂದನೆ ಸಲ್ಲಿಸಿದರು. ಮುಂದಿನ ಭಾರಿ ಭೂ ಮಾಲಕರೆ ಅವರ ಗದ್ದೆಯಲ್ಲಿ ಕೃಷಿ ಮಾಡಬೇಕೆಂದು ತಿಳಿಸಿ ಭೂ ಮಾಲಕರು ಹಡಿಲು ಬಿಟ್ಟರೆ ಅಂತಹ ಭೂಮಿಯಲ್ಲಿ ಕೇದಾರೋತ್ಥಾನ ಕಂಪನಿಯ ಮೂಲಕ ಕೃಷಿ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂರ್ಭದಲ್ಲಿ ಕೇದಾರೋತ್ಥಾನ ಕಂಪನಿಯ ನರ್ದೇಶಕರಾದ ರಾಘವೇಂದ್ರ ಕಿಣಿ, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಸ್ಥಳೀಯ ರೈತರು ಉಪಸ್ಥಿತರಿದ್ದರು.