ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನ್ಯಾಯಯುತ ಮರುತನಿಕೆಗೆ ಆಗ್ರಹಿಸಿ ಕುಮಟಾದಲ್ಲಿ ಪ್ರತಿಭಟನೆ
ಕುಮಟಾ- ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಧರ್ಮಸ್ಥಳದಲ್ಲಿ 2012 ರಲ್ಲಿ ನಡೆದ ಕಾಲೇಜ್ ವಿದ್ಯಾರ್ಥಿನಿ ಕುಮಾರಿ ಸೌಜನ್ಯ ಗೌಡ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನ್ಯಾಯಾಂಗ ಸುಪರ್ದಿಯಲ್ಲಿ ಮರು ತನಿಖೆ ಕೈಗೊಂಡು ನೈಜ ಆರೋಪಿಗಳನ್ನು ಹೊರಗೆಳೆದು ಕಾನೂನಿನ ಕುಣಿಕೆಗೆ ಒಪ್ಪಿಸುವಂತೆ ಆಗ್ರಹಿಸಿ, ಕರವೇ ಸ್ವಾಭಿಮಾನಿ ಬಳಗ ಕುಮಟಾ ಇವರ ನೇತೃತ್ವದಲ್ಲಿ ಕುಮಟಾದಲ್ಲಿ ಶನಿವಾರ ಮದ್ಯಾಹ್ನ ಅಲ್ಲಿನ ಸಹಾಯಕ ಆಯುಕ್ತರ(ಎಸಿ) ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಇದಕ್ಕೂ ಮೊದಲು ಕುಮಟಾ ಪಟ್ಟಣದ ಗಿಬ್ ವ್ರತ್ತದಲ್ಲಿ ಎಲ್ಲರೂ ಒಂದೆಡೆ ಸೇರಿ ಅಲ್ಲಿಂದ ಕಾಲ್ನಡೆಗೆಯ ಮೂಲಕ ಸಾಗಿ ಸಹಾಯಕ ಆಯುಕ್ತರ ಕಛೇರಿಗೆ ತಲುಪಿದರು.
ಈ ಸಂದರ್ಭದಲ್ಲಿ ಅಲ್ಲಿನ ವಿವಿಧ ಸಂಘಟನೆಗಳ ಮುಖಂಡರು, ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಈ ಒಂದು ಮಹತ್ವದ ಕಾರ್ಯದಲ್ಲಿ ಹಲವು ಜನರು ಭಾಗಿಯಾಗುವ ಮೂಲಕ ತಮ್ಮ ಅಳಿಲು ಸೇವೆ ಸಲ್ಲಿಸಿದರು.