ಶಕಟಪುರಂ ಶ್ರೀ ಬದರಿ ಶಂಕರಾಶ್ರಮ ಸಂಸ್ಥಾನದಲ್ಲಿ ಎಲ್ಲರ ಮನಗೆದ್ದ ಉಮೇಶ ಮುಂಡಳ್ಳಿ ಭಕ್ತಿ ಸಂಗೀತ
ಭಟ್ಕಳ- ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ದ ಕ್ಷೇತ್ರಗಳಲ್ಲಿ ಒಂದಾದ ಕೊಪ್ಪ ತಾಲೂಕಿನ ಶಕಟಪುರಂ ಶ್ರೀ ಮಠದಲ್ಲಿ ನಲ್ಲಿ ಜಿಲ್ಲೆಯ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಅವರ ಭಕ್ತಿ ಸಂಗೀತ ಕಾರ್ಯಕ್ರಮ ರವಿವಾರ ನಡೆಯಿತು.
ಚಾತುರ್ಮಾಸದ ಅಂಗವಾಗಿ ಶ್ರೀ ಜಗದ್ಗುರು ಬದರಿ ಶಂಕರಾಶ್ರಮ ಸಂಸ್ಥಾನಂ ಶಕಟಪುರಂ ಕ್ಷೇತ್ರದಲ್ಲಿ ರವಿವಾರ ಮುಂಡಳ್ಳಿ ಅವರ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಗುರುಗಳು ಹಾಗೂ ಕ್ಷೇತ್ರದ ಭಕ್ತವೃಂದದವರ ಎದುರಿನಲ್ಲಿ ಎರಡು ಗಂಟೆಗಳ ಕಾಲ ನಡೆದ ಮುಂಡಳ್ಳಿ ಯವರ ಭಕ್ತಿಪೂರ್ಣವಾದ ಸಂಗೀತ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಉಮೇಶ ಮುಂಡಳ್ಳಿ ಅವರೊಂದಿಗೆ ಮಕ್ಕಳಾದ ನಿನಾದ ಹಾಗೂ ಉತ್ಥಾನ ಸಹಗಾಯನದಲ್ಲಿ ಭಾಗವಹಿಸಿದರು. ಕಾರ್ಯಮಕ್ಕೆ ರಾಧಾಕೃಷ್ಣ ಕೊಪ್ಪ ತಬಲಾ ಸಾಥ್ ನೀಡಿದರೆ ರಾಮಕೃಷ್ಣ ಭಟ್ ಕೀಬೋರ್ಡ್ ಸಾಥ್ ನೀಡಿದರು.
ಕಾರ್ಯಕ್ರಮದ ನಂತರ ಶ್ರೀ ಮಠದ ಆಡಳಿತ ಅಧಿಕಾರಿ ಶ್ರೀ ಚಂದ್ರಮೌಳೇಶ್ವರಂ ಅವರು ಶ್ರೀಮತಿ ರೇಷ್ಮಾ ಹಾಗೂ ಉಮೇಶ ಮುಂಡಳ್ಳಿ ದಂಪತಿಗಳನ್ನು ಸನ್ಮಾನಿಸಿದರು.