ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ಮೇಳದಲ್ಲಿ ಉಡುಪಿ ಕಿನಾರಾ ಮೀನುಗಾರ ಉತ್ಪಾದಕ ಕಂಪನಿಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ
ಬೆಂಗಳೂರು : ಜಲಾನಯನ ಇಲಾಖೆ, ಮೀನುಗಾರಿಕಾ ಇಲಾಖೆ ಹಾಗೂ ಸ್ಕೊಡವೆಸ್ ಸಂಸ್ಥೆಯ ಸಹಯೋಗದಲ್ಲಿ ರಚಿತವಾದ ಉಡುಪಿ ಕಿನಾರಾ ಮೀನುಗಾರರ ಉತ್ಪಾದಕ ಕಂಪನಿಯು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನವರಿ ೫ ರಿಂದ ೭ ನೇ ತಾರೀಖಿನವರೆಗೆ ನಡೆದ ಸಿರಿಧಾನ್ಯ ಮತ್ತು ಅಂತರಾಷ್ಟ್ರೀಯ ಮೇಳದಲ್ಲಿ ಭಾಗವಹಿಸಿ ತನ್ನ ಕಂಪನಿಯ ಮೀನಿನ ಮೌಲ್ಯವರ್ಧಿತ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದಲ್ಲಿ ಪಾಲ್ಗೊಂಡಿತು. ಈ ಸಂದರ್ಭದಲ್ಲಿ ಕರ್ನಾಟಕ ಕೃಷಿ ಸಚಿವರಾದ ಚೆಲುವರಾಯ ಸ್ವಾಮಿ, ಜಲಾನಯನ ಇಲಾಖೆಯ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪಚ್ಚಲೆ ಕೃಷಿಯ ಮೂಲಕ ಮೀನುಗಾರ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಿದ ಉಡುಪಿ ಕಿನಾರಾ ಕಂಪನಿಯ ಕಾರ್ಯವೈಖರಿಯ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಸ್ಕೊಡವೆಸ್ ಸಂಸ್ಥೆಯ ರೈತ ಉತ್ಪಾದಕ ಕಂಪನಿಯ ಯೋಜನಾಧಿಕಾರಿ ಪ್ರಶಾಂತ ನಾಯಕ, ಉತ್ತರ ಕನ್ನಡ ಉಡುಪಿ ಜಿಲ್ಲಾ ಸಂಯೋಜಕ ಗಂಗಾಧರ ನಾಯ್ಕ, ಫೀಲ್ಡ ಆಫಿಸರ್ ಉಮೇಶ್ ಮರಾಠಿ, ವಿನಾಯಕ ಹೆಗಡೆ, ಉಡುಪಿ ಕಿನಾರಾ ಮೀನುಗಾರ ಉತ್ಪಾದಕ ಕಂಪನಿಯ ನಿರ್ದೇಶಕ ಸುದಿನ ಪೂಜಾರಿ ಮುಖ್ಯ ಕಾರ್ಯ ನಿರ್ವಾಹಕಿ ಗಾಯತ್ರಿ, ಡಿಇಓ ವಿಧಿಕ್ಷಾ, ಎಲ್.ಆರ್.ಪಿ. ಭೂಮಿಕಾ, ಮುಂತಾದವರು ಉಪಸ್ಥಿತರಿದ್ದರು.