ಅನಂತಮೂರ್ತಿ ಹೆಗಡೆ ಪಾದಯಾತ್ರೆಗೆ ನಾನು ಕೈಜೋಡಿಸುವೆ ಎಂದ ವೃಕ್ಷ ಮಾತೆ ತುಳಿಸಿಗೌಡ*
ಅಂಕೋಲಾ:- ಶಿರಸಿಯ ಸಾಮಾಜಿಕ ಹೋರಾಟಗಾರ ಹಾಗೂ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆಯವರು ಕುಮಟಾದಲ್ಲಿ ಈ ಹಿಂದೆ ಘೋಷಣೆಯಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮುಂಬರುವ ಬಜೆಟ್ ಅಧಿವೇಶನದಲ್ಲಿ ಹಣ ಬಿಡುಗಡೆ ಹಾಗೂ ಜಿಲ್ಲೆಯ ಯುವಕರಿಗೆ ಉದ್ಯೋಗ ನೀಡುವಂತೆ ಕೈಗಾರಿಕೆಗಳನ್ನು ಸ್ಥಾಪಿಸುವಂತೆ ಆಗ್ರಹಿಸಿ ಇದೇ ತಿಂಗಳು 5 ಸೋಮವಾರದಿಂದ ಕುಮಟಾದಿಂದ ಭಟ್ಕಳದವರೆಗೆ ಮೂರು ದಿನಗಳ ಕಾಲ ಹಮ್ಮಿಕೊಂಡ ಪಾದಯಾತ್ರೆಗೆ ನನ್ನ ಬೆಂಬಲವಿದೆ ಸಾಧ್ಯವಾದರೆ ಪಾದಯಾತ್ರೆಯಲ್ಲಿ ನಾನು ಸಹ ಪಾಲ್ಗೊಳ್ಳುತ್ತೇನೆ ಎನ್ನುವುದರ ಮೂಲಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ವೃಕ್ಷ ಮಾತೆ ಶ್ರೀಮತಿ ತುಳಸಿ ಗೌಡ ಅನಂತಮೂರ್ತಿ ಹೆಗಡೆ ನೇತೃತ್ವದ ಪಾದಯಾತ್ರೆ ಬೆಂಬಲ ವ್ಯಕ್ಯಪಡಿಸಿದ್ದಾರೆ.
ಅನಂತಮೂರ್ತಿ ಹೆಗಡೆ ತಾವು ಹಮ್ಮಿಕೊಂಡ ಪಾದಯಾತ್ರೆಗೆ ವೃಕ್ಷಮಾತೆ ತುಳಿಸಿ ಗೌಡ ಅವರನ್ನು ಆಹ್ವಾನಿಸಲು ಅವರ ಮನೆಗೆ ತೆರಳಿದ ಸಂದರ್ಭದಲ್ಲಿ ಮಾತನಾಡಿದ ಅವರು. ಈ ಹಿಂದೆ ಶಿರಸಿಯಿಂದ ಕಾರವಾರದವರೆಗೆ ಹಮ್ಮಿಕೊಂಡ ಪಾದಯಾತ್ರೆಗೂ ನನ್ನನ್ನು ಆಹ್ವಾನಿಸಿದ್ದರು ಆಗಲೂ ನಾನು ಅವರ ಪಾದಯಾತ್ರೆಗೆ ಬೆಂಬಲ ನೀಡಿದ್ದೆ. ಇದು ಜಿಲ್ಲೆಯ ಜನರ ಓಕ್ಕೊರಲಿನ ಹೋರಾಟವಾಗಿದ್ದರಿಂದ ಪ್ರತಿಯೊಬ್ಬರು ಪಾಲ್ಗೊಳ್ಳುವುದು ಅವಶ್ಯ. ಅನಂತಮೂರ್ತಿ ಹೆಗಡೆಯವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ಅವರು ಜನರಿಗಾಗಿ ಹೋರಾಟ ಮಾಡಿತ್ತಿದ್ದಾರೆ ಆದ್ದರಿಂದ ಇಂತಹ ಹೋರಾಟಗಳಿಗೆ ನನ್ನ ಬೆಂಬಲವಿರುತ್ತದೆ. ಜಿಲ್ಲೆಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆಗಲೇಬೇಕು ಎಂದು ಈ ವೇಳೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ, ಕರವೇ ಜನಧ್ವನಿಯ ಅಧ್ಯಕ್ಷ ಉಮೇಶ ಹರಿಕಾಂತ ಉಪಸ್ಥಿತರಿದ್ದರು.