ಶಿರಸಿ- ಶಿರಸಿ ನಗರದಲ್ಲಿ ಇಂದು ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟವರು ಶಿಕ್ಷಕಿ ವಿಜಯಾ ಮಾಸ್ತೆಪ್ಪ ಬೋವಿ ಎಂದು ಗುರುತಿಸಲಾಗಿದೆ.ಇವರು ಬಂಡಲ್ ಶಾಲೆಯ ಪ್ರಾಥಮಿಕ ಶಾಲೆಯ ಶಿಕ್ಷಕಿ.ಇವರು ತಮ್ಮ ಗಂಡನ ಜೊತೆ ಬೈಕ್ ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಮಿರ್ಜಾನಕರ ಪೆಟ್ರೋಲ್ ಪಂಪ್ ಬಳಿ ಬೈಕ್ ನಿಯಂತ್ರಣ ತಪ್ಪಿ ಕೆಳೆಗೆ ಬಿದ್ದಿದೆ.ಈ ಸಂದರ್ಭದಲ್ಲಿ ಶಿಕ್ಷಕಿ ನಗರಸಭೆಯ ತ್ಯಾಜ್ಯ ತುಂಬುವ ಟ್ರಕ್ ಕೆಳೆಗೆ ಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿತೆಂದು ತಿಳಿದು ಬಂದಿದೆ.ಪೊಲೀಸ್ ತನಿಖೆ ಇಂದ ಇನ್ನು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.