ಭಟ್ಕಳ್ದಲ್ಲಿ ತಾಯಿ ಮತ್ತು ಮಗಳು ಒಂದೇ ದಿನ ನೇಣಿಗೆ ಶರಣು
ಭಟ್ಕಳ-ತಾಯಿ ಮತ್ತು ಮಗಳು ಒಂದೇ ದಿನ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ತಾಲೂಕಿನ ಯಲ್ವಡಿಕವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋರಿಕಲ್ಲು ಮನೆಯಲ್ಲಿ ನಡೆದಿದೆ.
ಮೃತರನ್ನು ಗೋರಿಕಲ್ಲು ಮನೆಯ ಕೃಷ್ಣಮ್ಮ ನಾರಾಯಣ ನಾಯ್ಕ (57) ಹಾಗೂ ಮಗಳು ಮಾದೇವಿ ದೊಡ್ಡಯ್ಯ ನಾಯ್ಕ (36) ಎಂದು ಗುರುತಿಸಲಾಗಿದೆ.
ಕೃಷ್ಣಮ್ಮ ಅವರ ಮಗಳು ಮಾದೇವಿ ತಾಯಿಯ ಮನೆಯ ಸಮೀಪದಲ್ಲಿಯೇ ಮನೆ ಮಾಡಿಕೊಂಡು ವಾಸ್ತವ್ಯ ಮಾಡಿಕೊಂಡು ಬಂದಿದ್ದಳು. ಓರ್ವ ಮಗಳು ಹಾಗೂ ಓರ್ವ ಮಗನಿದ್ದಾನೆ. ಇಂದು ಮನೆಯಲ್ಲಿದ್ದವರೆಲ್ಲರೂ ಸಂಬಂಧಿಕರ ಮದುವೆ ಹೋಗಿರುವುದರಿಂದ ಒಬ್ಬಳೇ ಇದ್ದ ಮಾದೇವಿ ನೇಣಿಗೆ ಶರಣಾಗಿದ್ದಾಳೆ.
ಮಾದೇವಿ ಮನೆಗೆ ಬಂದ ಕೃಷ್ಣಮ್ಮ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದನ್ನು ಕಂಡವಳೇ ಮನೆಗೆ ಹೋಗಿ ತಾನೂ ಕೂಡಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಮದ್ಯೆ ಮಾದೇವಿ ಈಕೆಯು ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು ಅದರಲ್ಲಿ ನನ್ನ ಶವವನ್ನು ತಾಯಿ ಹಾಗೂ ಸಹೋದರ ನೋಡಬಾರದು ಎಂದು ಬರೆದಿಟ್ಟಿದ್ದಾಳೆ ಎನ್ನಲಾಗಿದೆ.
ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದು ಇಬ್ಬರ ಸಾವಿಗೆ ನಿಖರ ಕಾರಣ ಮಾತ್ರ ತಿಳಿದು ಬಂದಿಲ್ಲ.ಪೊಲೀಸ್ ತನಿಖೆಯಿಂದ ಇನ್ನು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.