ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ ವೃತಾಚರಣೆ ಭಟ್ಕಳ ತಾಲೂಕಿನ ಕರಿಕಲ್ ನಲ್ಲಿರುವ ಶಾಖಾಮಠದಲ್ಲಿ ನಾಳೆಯಿಂದ(ಜುಲೈ 21) ಆರಂಭ
ಭಟ್ಕಳ- ಜುಲೈ 21 ರಿಂದ ಆಗಸ್ಟ್ 3೦ ರ ತನಕ ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಭಟ್ಕಳ ತಾಲೂಕಿನ ಕರಿಕಲ್ ನಲ್ಲಿರುವ ಶಾಖಾಮಠದಲ್ಲಿ ಚಾತುರ್ಮಾಸ ವೃತಾಚರಣೆಯನ್ನು ಕೈಗೊಳ್ಳುತ್ತಿದ್ದು, ಆ ಪ್ರಯುಕ್ತ ಪ್ರಾರಂಭದ ದಿನವಾದ ದಿನಾಂಕ 21-07-24 ರ ರವಿವಾರ ಬೆಳಿಗ್ಗೆ 10-30 ಕ್ಕೆ ಸರಿಯಾಗಿ ಶ್ರೀ ನಿಚ್ಚಲಮಕ್ಕಿ ವೆಂಕಟ್ರಮಣ ದೇವಸ್ಥಾನ ಆಸರಕೇರಿ ಇಂದ ಪರಮಪೂಜ್ಯ ಸ್ವಾಮಿಜೀಯವರು ಭವ್ಯ ಮೆರವಣಿಗೆ ಮೂಲಕ ರಥದಲ್ಲಿ ಕರಿಕಲ್ ನ ಧ್ಯಾನ ಮಂದಿರಕ್ಕೆ ಪುರಪ್ರವೇಶ ಮಾಡುವರು.
ಮೆರವಣಿಗೆಯ ಯೋಜನೆಯಂತೆ ಕಾರು, ರಿಕ್ಷಾ ಹಾಗೂ ಬೈಕ್ ಗಳನ್ನೊಳಗೊಂಡ ಭವ್ಯ ಮೆರವಣಿಗೆಯು ಆಸರಕೇರಿಯಿಂದ ಸೋನಾರಕೇರಿ ಮಾರ್ಗವಾಗಿ ಭಟ್ಕಳ ನಗರ ಪೋಲೀಸ್ ಠಾಣೆಯ ಮುಂಭಾಗದ ರಸ್ತೆ ಮೂಲಕ ಭಟ್ಕಳ ಪಿ ಎಲ್ ಡಿ ಬ್ಯಾಂಕ್ ಎದುರಿನ ಮಾರ್ಗವಾಗಿ ಭಟ್ಕಳದ ಮುಖ್ಯವೃತ್ತ ತಲುಪಿ ,ಅಲ್ಲಿಂದ ಬಂದರ್ ರೋಡ್ ಮಾರ್ಗವಾಗಿ ಮುಂದುವರೆದು, ಹನುಮಾನ್ ನಗರದ ಮಾರ್ಗವಾಗಿ ಕರಿಕಲ್ ನ ಧ್ಯಾನ ಮಂದಿರಕ್ಕೆ ಸಾಮೀಜಿ ಅವರ ಪುರಪ್ರವೇಶವಾಗುವುದರ ಮೂಲಕ
ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಪ್ರಪ್ರಥಮ ಬಾರಿಗೆ ಭಟ್ಕಳ ತಾಲೂಕಿನ ಕರಿಕಲ್ ನಲ್ಲಿರುವ ಶಾಖಾಮಠದಲ್ಲಿ ಚಾತುರ್ಮಾಸ ಚಾತುರ್ಮಾಸ ವೃತಾಚರಣೆಯನ್ನು ಆರಂಭಗೊಳ್ಳಲಿದೆ.
ನಂತರ ಪ್ರತಿ ದಿನ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಆದ ಕಾರಣ, ಸದ್ಭಕ್ತ ಸಮಾಜ ಬಾಂಧವರು , ಸರ್ವ ಸಮಾಜದ ಸಾರ್ವಜನಿಕರು,ಹೆಚ್ಚಿನ ಸಂಖ್ಯೆಯಲ್ಲಿ ಸಪರಿವಾರ ಸಮೇತ ತಮ್ಮ ತಮ್ಮ ವಾಹನಗಳಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡು ಶಿಸ್ತುಬದ್ದವಾದ ಮೆರವಣಿಗೆಯ ಮೂಲಕ ಪರಮಪೂಜ್ಯ ಸ್ವಾಮೀಜಿಯವರ ಪುರಪ್ರವೇಶ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಮನವಿ ಮಾಡಿಕೊಂಡಿದ್ದಾರೆ.