ಕೇಂದ್ರದ ಬಿಜೆಪಿ ಸರಕಾರ ಮತ್ತು ಹೆದ್ದಾರಿ ಕಾಮಗಾರಿ ನಡೆಸಿರುವ ಐಅರ್ಬಿ ಕಂಪೆನಿಯೇ ಅಂಕೋಲಾ ಶಿರೂರಿನ ಗುಡ್ಡ ಕುಸಿತಕ್ಕೆ ಕಾರಣ- ಸಚಿವ ಮಂಕಾಳ ವೈದ್ಯ
ಮಂಗಳೂರು: ಕೇಂದ್ರದ ಬಿಜೆಪಿ ಸರಕಾರ ಮತ್ತು ಹೆದ್ದಾರಿ ಕಾಮಗಾರಿ ನಡೆಸಿರುವ ಐಅರ್ಬಿ ಕಂಪೆನಿಯ ಬೇಜವಾಬ್ದಾರಿಯೇ ಶಿರೂರು ಗುಡ್ಡ ಕುಸಿತಕ್ಕೆ ಕಾರಣ ಎಂದು ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ ಆರೋಪಿಸಿದ್ದಾರೆ.ಮಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಐಆರ್ಬಿ ಬಿಜೆಪಿ ಕಂಪೆನಿ ಎಂದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.
ಐಆರ್ಬಿಗೆ 11 ವರ್ಷಗಳಿಂದ ಈ ರಸ್ತೆಯನ್ನು
ಪೂರ್ತಿ ಮಾಡಲಾಗಲಿಲ್ಲ. ಅವೈಜ್ಞಾನಿಕ ಕಾಮಗಾರಿಯಿಂದ ಈ ರೀತಿಯ ದುರಂತ ನಡೆದಿದೆ. ಸೆಂಟ್ರಲ್ ಟೀಮ್ ಬಂದು ಇಲ್ಲಿಯೇ ಕುಸಿಯುತ್ತದೆ ಅಂದರೂ ಏನೂ ಕ್ರಮ ಕೈಗೊಂಡಿಲ್ಲ ಎಂದು ಮಾಂಕಾಳ ವೈದ್ಯ ಆರೋಪಿದರು.
ಇದೊಂದು ಅವೈಜ್ಞಾನಿಕ ಕಾಮಗಾರಿಯಾಗಿದ್ದು, ಐಆರ್ಬಿ ವಿರುದ್ಧ ಎರಡು ಎಫ್ಐಆರ್ ದಾಖಲಾಗಿದೆ. ಅವೈಜ್ಞಾನಿಕ ಕಾಮಗಾರಿಯ ತನಿಖೆಗೂ ಒತ್ತಾಯಿಸಿದ್ದೇವೆ ಎಂದು ಅವರು ಹೇಳಿದರು.
ಆದರೆ ಇದೆಲ್ಲಾ ಗೊತ್ತಿದ್ದು ಬಿಜೆಪಿ ಮಾತ್ರ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ನಾವು ಈ ಪ್ರಕರಣದಲ್ಲಿ ರಾಜಕೀಯ ಮಾಡಿಲ್ಲ. ಮಾನವೀಯತೆಯ ದೃಷ್ಟಿಯಿಂದ ಏನು ಮಾಡಬೇಕು ಅದನ್ನು ಮಾಡಿದ್ದೇವೆ. ಸಿಎಂ, ಕಂದಾಯ ಸಚಿವರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ ಎಂದು ಸಚಿವರು ಹೇಳಿದರು.
ಏನೇ ಮಾಡಿದ್ರೂ ಐಆರ್ಬಿ ಮೂಲ ಬಿಜೆಪಿ. ಅವರು ಅದನ್ನು ಹೊರತುಪಡಿಸಿ ರಾಜಕಾರಣ ಮಾಡುತ್ತಿದ್ದಾರೆ.ಮೊದಲು ಅದನ್ನು ಸರಿ ಮಾಡಲಿ ಎಂದರು.