ಅಂಕೋಲದ ಶಿರೂರು ಗುಡ್ಡ ಕುಸಿತದಿಂದ ಬಂದ್ ಆದ ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ಸಂಚಾರ ಪ್ರಾರಂಭ ಯಾವಾಗ? ಬಂದಾಗಿರುವ ಶಿರೂರಿನ ರಸ್ತೆಯಿಂದ ಪ್ರತಿನಿತ್ಯ ಪ್ರಯಾಣಿಕರ ನಿಲ್ಲದ ಪರದಾಟ.. ಸೂಕ್ತ ಕ್ರಮ ವಹಿಸುವರೇ ಜನಪ್ರತಿನಿಧಿಗಳು. ಸಂಬಂಧಿಸಿದ ಆಡಳಿತ ವರ್ಗ ಮತ್ತು ಜಿಲ್ಲಾಡಳಿತ
ಅಂಕೋಲಾ-ಅಂಕೋಲಾ ತಾಲೂಕಿನ ಶಿರೂರಿನ ಗುಡ್ಡ ಕುಸಿದು ಈಗಾಗಲೇ 13 ದಿನ ಕಳೆದಿದೆ.. ಆದರೂ ರಾಷ್ಟ್ರೀಯ ಹೆದ್ದಾರಿ 66 ರಸ್ತೆ ಮಾರ್ಗ ಸಂಚಾರಕ್ಕೆ ಇನ್ನು ಮುಕ್ತವಾಗಿಲ್ಲದ ಕಾರಣ ದಿನ ಬೆಳಗ್ಗೆಯಾದರೆ ಈ ರಸ್ತೆಯಲ್ಲಿ ಸಂಚರಿಸುವ ಸಾವಿರಾರು ಪ್ರಯಾಣಿಕರು ಜಿಲ್ಲಾಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ಶಿರೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪರಿಣಾಮ,8ಕ್ಕೂ ಹೆಚ್ಚು ಶವಗಳು ನದಿ ತೀರದಲ್ಲಿ ದೊರಕಿದೆ. ಈಗಾಗಲೇ ಪೋಲಿಸ್ ಇಲಾಖೆ. ಅಗ್ನಿಶಾಮಕ ದಳ. ಎನ್ ಡಿ ಆರ್ ಎಫ್. ರಕ್ಷಣಾ ತಂಡಗಳು ಗಂಗಾ ವಳಿ ನದಿ ತೀರದ ದುರಂತ ನಡೆದ ಸ್ಥಳದಲ್ಲಿ ಕಾರ್ಯಚರಣೆ ಮುಂದುವರಿಸಿದ್ದರು. ಈಗ 13 ದಿನಗಳ ಬಳಿಕ ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಶಿರೂರಿ ನ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗದ ರಸ್ತೆಯ ಮಣ್ಣನು ಸಂಪೂರ್ಣ ತೆರವು ಗೊಳಿಸಿದ್ದು .. ಇನ್ನೊಂದೆಡೆ ರಸ್ತೆಯ್ ಮಣ್ಣನ್ನು ತೆರವುಗೊಳಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ.ಶಿರುರಿನ ರಸ್ತೆ ಸಂಚಾರ ನಿಂತು ಹೋಗಿದ್ದ ಕಾರಣ ಮಕ್ಕಳು.ಮಹಿಳೆಯರು. ವಯೋವೃದ್ದರೂ. ನರಕ ಯಾತನೆಅನುಭವಿಸುತ್ತಿದ್ದಾರೆ.
ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಬರಲು ಮಾದನಗೇರಿಯಿಂದ ಕೊಡಸಣಿ. ಅಗಸೂರು ಮಾರ್ಗವನ್ನು ಸಂಚಾರಕ್ಕೆ ಅನು ಮಾಡಿದರು ಕೂಡ ಆ ರಸ್ತೆಗಳು ಸಂಪೂರ್ಣ ಹದಗೆ ಟ್ಟಿದ್ದು ಪ್ರತಿನಿತ್ಯ ಒಂದಿಲ್ಲೊಂದ್ದು ಅನಾಹುತ ಸಂಭವಿಸುತ್ತಿದೆ. ಶಾಲೆಯ ಮಕ್ಕಳು. ಸರ್ಕಾರಿ ನೌಕರರು. ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ… ಸಾರಿಗೆ ಬಸ್ ಚಾಲಕರು . ನಿರ್ವಾಹಕರು ಕೊಡ್ಸನಿ. ಅಗಸೂರು ಮಾರ್ಗದ ಮೂಲಕ ಅಂಕೋಲಾ ಬಸ್ ನಿಲ್ದಾಣಕ್ಕೆ ತಲುಪುವಷ್ಟರಲ್ಲಿ ಹೈರಾಣ್ಣಾಗಿ ಹೋಗುತ್ತಿದ್ದಾರೆ.
ಇನ್ನೊಂದೆಡೆ ಅಂಕೋಲದಿಂದ ಮಂಜುಗುಣಿಯ ಮೂಲಕ ಗಂಗಾವಳಿ ಸೇತುವೆಯನ್ನು ದಾಟಿ ಕುಮಟಕ್ಕೆ ತೆರಳಲು ಪ್ರಯಾಣದ ದೂರ ಕಡಿಮೆ ಇದ್ದು.. ಗಂಗಾವಳಿ ಸೇತುವೆ ಕಾಮಗಾರಿ 90% ವರ್ಷದ ಹಿಂದೆ ಯೇ ಪೂರ್ಣಗೊಂಡಿದ್ದರು. ಕಾಮಗಾರಿ ಪಡೆದ ಟೆಂಡರ್ ದಾರಿನಿಂದ ಸೇತುವೆಯ ಎರಡು ಕಡೆಯ ಭಾಗದಲ್ಲಿ ಅಂತಿಮ ಹಂತದ ಕಾಮಗಾರಿ ಪೂರ್ಣಗೊಳಿಸಿದೇ ಇರುವ ಕಾರಣ ಬೃಹತ್ ವಾಹನದ ಸಂಚಾರಕ್ಕೆ ಪೂರ್ಣಗೊಂಡಿಲ್ಲ.. ಜೊತೆಗೆ ಅಧಿಕಾರಿಗಳ. ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ ಧೋರಣೆ ಎದ್ದು ಕಾಣುತ್ತಿದೆ.. ಗಂಗಾವಳಿ ಸೇತುವೆ ಬೃಹತ್ ಗಾತ್ರದ ವಾಹನಗಳ ಸಂಚಾರಕ್ಕೆ ಯೋಗ್ಯವಾಗಿದ್ದರೆ ಕುಮಟಕ್ಕೆ ತೆರಳಲು ಗಂಗಾವಳಿ ಸೇತುವೆಯು ಅತ್ಯುತ್ತಮ ರಸ್ತೆ ಮಾರ್ಗವಾಗಿತ್ತು.
ಸರಿಯಾದ ಸಮಯಕ್ಕೆ ಕಾರ್ಯಚರಣೆ ಮಾಡುತ್ತಿಲ್ಲ ರಕ್ಷಣಾ ಪಡೆಗಳು : ಶಿರುರಿನ ಗುಡ್ಡಕುಸಿತದ ಕಾರ್ಯಚರಣೆ ಬೆಳಗಿನ ಜಾವ 6:00 ಗಂಟೆಯಿಂದ ನಡೆಯದೇ ಒಂಬತ್ತು ಗಂಟೆಯಿಂದ ಕಾರ್ಯಚರಣೆ ಪ್ರಾರಂಭವಾಗುತ್ತಿದೆ . ಮಲಯಾಳಂನ ಸುದ್ದಿ ಚಾಲನಗಳ ವರದಿಗಾರರು ಪ್ರತಿದಿನ ದುರಂತ ಸ್ಥಳಕ್ಕೆ ಬಂದ ಸಮಯದಲ್ಲಿಯೇ ಹೆಚ್ಚಾಗಿ ಕಾರ್ಯಚರಣೆನ್ನು ಪ್ರಾರಂಭ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಜೊತೆಗೆ ಇದಲ್ಲದೇ ಅತ್ಯಾಧುನಿಕ ತಂತ್ರಜ್ಞಾನದ ಡ್ರೋನ್ ಕ್ಯಾಮರಗಳು ಶಿರೂರಿನ್ ಗುಡ್ಡ ಕುಸಿತದ ಸ್ಥಳಕ್ಕೆ ಬಂದಾಗ ಡ್ರೋನನ್ನು ನೋಡುತ್ತಲೇ 3ರಿಂದ್ 4 ದಿನಗಳ ಸಮಯ ವ್ಯರ್ಥ ಮಾಡಲಾಗಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ಜಿಲ್ಲಾಧಿಕಾರಿಗಳು ಶಿರೂರಿನ ಕಳೆದ ಗುಡ್ಡ ಕುಸಿತದ ದಿನದಿಂದ ಇಲ್ಲಿಯವರೆಗೆ ನಿರಂತರವಾಗಿ ತಾಲೂಕಿನ ಅನೇಕ ಶಾಲಾ -ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತ್ತು.. ಆದರೆ ಸೋಮವಾರದಿಂದ ಶಾಲೆ -ಕಾಲೇಜುಗಳುಪುನರಾರಂಭವಾಗುವ ಸಾಧ್ಯತೆ ಇದೆ…
ಶಿರೂರಿನ್ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಚಾರ ಯಾವಾಗ ಪ್ರಾರಂಭವಾಗುತ್ತದೆಯೋ ಎಂದು ಜನರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ರಸ್ತೆ ಮಾರ್ಗ ಚಾಲು ಆಗಿ ಮತ್ತೆ ಏನಾದರೂ ಗುಡ್ಡ ಕುಸಿದು ಸಾವು ನೋವು ಸಂಭವಿಸಿದರೆ ಅದರ ಹೊಣೆ ಜಿಲ್ಲಾ ಆಡಳಿತದ ಮೇಲೆ ಇದೆ..ತ್ರಿಶಂಕು ಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳ ಪರಿಸ್ಥಿತಿ ಇದೆ.
ಆದರೆ ರಸ್ತೆ ಸಂಚಾರ ಆದ ಮೇಲೆ ಗುಡ್ಡ್ ಕುಸಿಯುತ್ತದೆಯೋ ಅಥವಾ ಇಲ್ಲವೋ ಎಂಬುದು ವಿಧಿ ಲಿಖಿತವಾಗಿದೆ.. ಕುಸಿಯುವುದೇ ಇದ್ದರೆ ಅದನ್ನು ತಪ್ಪಿಸಲು ಯಾರಿಂದಲು ಸಾಧ್ಯವಿಲ್ಲ.. ವಿಧಿಯಾಟಕ್ಕೆ ಹೊಣೆ ಯಾರು ಹೇಳಿ… ಎಷ್ಟು ದಿನ ಗುಡ್ಡ ಕುಸಿಯುತ್ತದೆ ಎಂದು ರಾಷ್ಟ್ರಿಯ ಹೆದ್ದಾರಿ ಯನ್ನು ಬಂದ್ ಮಾಡಿ ಇಡುತ್ತೀರಿ ಎಂದು ಜಿಲ್ಲಾಡಲಿತಕ್ಕೆ ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ?
ಶಿರೂರಿನ್ ಒಂದು ಕಡೆ ರಾಷ್ಟ್ರೀಯ ಹೆದ್ದಾರಿಯ ಮಣ್ಣನ್ನು ಜಿಲ್ಲಾಡಳಿತದಿಂದ ತೆರವು ಗೊಳಿಸಿದ್ದು ಸದರಿ ತೆರವುಗೊಳಿಸಿದ ರಸ್ತೆಯಿಂದ ಅರ್ಧ ನಿಮಿಷಕ್ಕೆ ಒಂದಾದ ಮೇಲೆ ಒಂದರಂತೆ ಸಾರಿಗೆ ಬಸ್ಸನ್ನು ಬಿಟ್ಟು ಸ್ವಲ್ಪಮಟ್ಟಿಗೆ ಪ್ರಯಾಣಿಕರ ಪ್ರಯಾಣದ ದೂರವನ್ನು ಕಡಿಮೆ ಮಾಡಲು ಉತ್ತರ ಕನ್ನಡ ಜಿಲ್ಲಾಡಳಿತ. ಶಾಸಕರು. ಉಸ್ತುವಾರಿ ಸಚಿವರು. ಚರ್ಚಿಸಿ ತಾವೆಲ್ಲರೂ ಈ ಸಂದರ್ಭದಲ್ಲಿ ಜವಾಬ್ದಾರಿಯನ್ನು ಹೋರಬೇಕಾಗಿದೆ.
ಹಾಗೂ ರಸ್ತೆ ಸಂಚಾರಕ್ಕೆ ಅನುವುಮಾಡಿಕೊಡುವ ಅನಿವಾರ್ಯತೆ ಅವಶ್ಯಕವಾಗಿದೆ .
ಶಿರೂರು ರಾಷ್ಟ್ರೀಯ ಹೆದ್ದಾರಿ66ರಲ್ಲಿ ಐ ಆರ್ ಬಿ ಯವರು ಅವೈಜ್ಞಾನಿಕ ಕಾಮಗಾರಿಯಿಂದ ರಾಷ್ಟ್ರೀಯ ಹೆದ್ದಾರಿಯ ಗುಡ್ಡ ಕುಸಿತ ಉಂಟಾಗುವುದರ ಜೊತೆಗೆ ಕಾಮಗಾರಿ ನಡೆಯದೇ ಇರುವ ಬೇರೆ ಬೇರೆ ಪ್ರದೇಶದಲ್ಲಿಯು ಕೂಡ ಗುಡ್ಡ ಕುಸಿಯುತ್ತಿರುವ ವರದಿಯು ಪ್ರಕಟವಾಗಿದೆ.
ಉತ್ತರ ಕನ್ನಡ ಜಿಲ್ಲಾಡಳಿತದಿಂದ ಶಿರೂರಿನ ರಾಷ್ಟ್ರೀಯ ಹೆದ್ದಾರಿ ೬೬ರ ರಸ್ತೆ ಮೇಲೆ ಬಿದ್ದಿರುವ ಕಲ್ಲು ಮಣ್ಣನ್ನು ಆದಷ್ಟು ಬೇಗ್ ತೆರೆವುಗೊಳಿಸಿ. ಈಗಾಗಲೇ ತೆರವು ಗೊಳಿಸಿರುವ ಒಂದು ಬದಿಯ ಹೆದ್ದಾರಿ ಮಾರ್ಗದ ಸಂಚಾರ ಆದಷ್ಟು ಬೇಗ ಸುಗಮಗೊಳಿಸಲು ಜೊತೆಗೆ ಗುಡ್ಡ ಕುಸಿತದಿಂದ ಪತ್ತೆಯಾಗದ ಮೂರು ಶವಗಳು ರಕ್ಷಣಾ ತಂಡಗಳು ಪತ್ತೆ ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.