ಗುಡ್ಡಕುಸಿತವಾದ ಅಂಕೋಲಾ ತಾಲೂಕಿನ ಶಿರೂರು ರಾಷ್ಟೀಯ ಹೆದ್ದಾರಿ 66 ರಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ನೀಡುವ ಕುರಿತು ಉತ್ತರ ಜಿಲ್ಲಾಧಿಕಾರಿಗಳು ಆದೇಶ
ಕಾರವಾರ: ಶಿರೂರು ಭಾಗದ ಸುರಕ್ಷತಾ ಕ್ರಮ ನೋಡಿ ವಾಹನ ಸಂಚಾರಕ್ಕೆ ಅವಕಾಶ ನೀಡಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹೇಳಿದರು.
ಶಿರೂರನಲ್ಲಿ ಗುಡ್ಡ ಕುಸಿದ ಭಾಗದಲ್ಲಿ ಮಣ್ಣಿನಿಂದ ಜಿನುಗುತ್ತಿರುವ ನೀರಿಗೆ ಹರಿಯಲು ದಾರಿ ಮಾಡಿಕೊಡಬೇಕು. ಅಪಾಯಕಾರಿ ಜಾಗವಾದ ಅಲ್ಲಿ 24 ತಾಸು ಪಾಳಿಯಲ್ಲಿ ವೀಕ್ಷಕರನ್ನು ಇಡಬೇಕು . 20 ಕಿ.ಮೀ.ವೇಗದಲ್ಲಿ ವಾಹನ ಚಲಾಯಿಸಬೇಕು ಎಂಬ ಷರತ್ತುಗಳನ್ನು ಪೂರೈಸಿದ ನಂತರ ವಾಹನಗಳನ್ನು ಸಂಚಾರಕ್ಕೆ ಬಿಡಬಹುದು ಎಂದು ಎಸ್ಪಿ ಅವರಿಗೆ ಸೂಚಿಸಿ ಪತ್ರ ಬರೆಯಲಾಗಿದೆ. ಅವರು ಈ ಷರತ್ತುಗಳನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಪೂರೈಸಿದೆಯಾ ಎಂಬುದ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೇಟಿಯಾದ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಜಿಎಸ್ ಐ ನಮಗೆ ಗೋವಾ ದಿಂದ ಕುಂದಾಪುರತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿ ಸ್ಥಳ ಗುರುತಿಸಿ ವರದಿ ನೀಡಿದೆ. ಅದನ್ನು ನಾವು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ನೀಡಿ, ಸೂಕ್ತ ಕ್ರಮಕ್ಕೆ ಆದೇಶಿಸಿದ್ದೇವೆ.ಶಿರೂರು ಭಾಗದಲ್ಲಿ ಗುಡ್ಡ ಕುಸಿತದ ಜಾಗದಲ್ಲಿ ಮಣ್ಣನ್ನು ಮತ್ತೆ ಸಡಿಲಿಸಬಾರದು. ಅಲ್ಲಿ ಸುರಕ್ಷತೆಗೆ ತಕ್ಷಣ ಮಾಡಬೇಕಾದ ಕೆಲಸ ಮಾಡಿ,ಸ್ಪಾಟರ್ಸಗಳನ್ನು ನೇಮಕ ಮಾಡಬೇಕು . ಗುಡ್ಡ ದಿಂದ ಮಣ್ಣು ಬಿದ್ದರೆ,ಮರ ಬಿದ್ದರೆ ಅದು ಭೂ ಕುಸಿತದ ಮೊದಲ ಸಂಕೇತ. ಅದನ್ನು ತಕ್ಷಣ ಸನಿಹದ ಪೊಲೀಸರಿಗೆ , ತಹಶಿಲ್ದಾರರು ಮತ್ತು ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿ ನೀಡಬೇಕು. ಅತಿ ಭಾರದ ವಾಹನಗಳನ್ನು ವೇಟ್ ಪರಿಶೀಲಿಸಿ ಬಿಡಬೇಕು.ಮಣ್ಣು ಕುಸಿತದ ಪ್ರದೇಶದಲ್ಲಿ ವಾಹನಗಳ ವೇಗ 20 ಕಿ.ಮೀ. ಮೀರಬಾರದು ಎಂಬ ಶರತ್ತು ವಿಧಿಸಲಾಗುತ್ತದೆ. ಇದನ್ನು ಪೊಲೀಸ್ ಇಲಾಖೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಿ,ಪತ್ರ ಬರೆದಿದ್ದೇನೆ. ಈಗ ಮುಂದಿನ ಕ್ರಮ ಪೊಲೀಸ್ ವರಿಷ್ಠರು ತೆಗೆದುಕೊಳ್ಳುತ್ತಾರೆ
ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದರು.