ದಶ ಲಕ್ಷ ಗಿಡ ನೆಡುವ ಅಭಿಯಾನ :
ಹಸಿರು ಮತ್ತು ಪರಿಸರ ಜಾಗ್ರತವಾಗಲಿ: ಶ್ರೀ ಶ್ರೀ ಶ್ರೀ ಬ್ರಹ್ಮನಂದ ಸರಸ್ವತಿ ಸ್ವಾಮೀಜಿ.
ಭಟ್ಕಳ : ಅರಣ್ಯವಾಸಿಗಳಿಂದ ಹಮ್ಮಿಕೊಂಡ ದಶ ಲಕ್ಷ ಗಿಡ ನೆಡುವ ಅಭಿಯಾನದಿಂದ ನಿಸರ್ಗದಲ್ಲಿ ಹಸಿರು ಮತ್ತು ಪರಿಸರ ಜಾಗ್ರತಕ್ಕೆ ಪೂರಕವಾಗಲಿ. ಈ ದಿಸೆಯಲ್ಲಿ ಕಾರ್ಯಕ್ರಮ ಯಶಸ್ಸಾಗಲಿ ಎಂದು ರಾಮ ಕ್ಷೇತ್ರ ಮಹಾ ಸಂಸ್ಥಾನದ ಗುರುಗಳಾದ ಬ್ರಹ್ಮನಂದ ಸ್ವಾಮೀಜಿ ಅವರು ಹೇಳಿದರು.
ಅವರು ಇಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಭಟ್ಕಳ್ ತಾಲೂಕಿನ ಕರಿಕಲ್ ಶಾಖ ಮಠದ ಆವರಣದಲ್ಲಿ ದಶ ಲಕ್ಷ ಗಿಡ ನೆಡುವ ಅಭಿಯಾನದ ಅಂಗವಾಗಿ, ಗಿಡಕ್ಕೆ ನೀರು ಏರೇಯುವದರೋಂದಿಗೆ ಆಶೀರ್ವದಿಸಿದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ರಾಜ್ಯಾದ್ಯಂತ ಅರಣ್ಯವಾಸಿಗಳಿಂದ ದಶ ಲಕ್ಷ ಗಿಡ ನೆಡುವ ಕರ‍್ಯಕ್ರಮದ ಕುರಿತು ಪರಿಸರದೊಂದಿಗೆ ಅರಣ್ಯವಾಸಿಗಳು ಸಹಭಾಗತ್ವದಲ್ಲಿ ಜೀವಿಸುವದೋದಿಗೆ ಅರಣ್ಯವಾಸಿಗಳು ಪರಿಸರಕ್ಕೆ ಪೂರಕವಾಗಿ ಜೀವಿಸಬೇಕೆಂಬ ಉಧ್ಧೇಶದಿಂದ ಗಿಡ ನೆಡುವ ಕರ‍್ಯಕ್ರಮವನ್ನು ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಕರ‍್ಯಕ್ರಮದಲ್ಲಿ ವಿವಿಧ ತಾಲೂಕಿನ ಅಧ್ಯಕ್ಷರಾದ ಭೀಮಸಿ ವಾಲ್ಮೀಕಿ ಯಲ್ಲಾಪುರ, ಶಿವಾನಂದ ಜೋಗಿ ಮುಂಡಗೋಡ, ರಾಜೇಶ ಮಿತ್ರ ನಾಯ್ಕ ಅಂಕೋಲ, ರಾಜು ಹರಿಕಾಂತ ಅಂಕೋಲ, ಪಾಂಡು ನಾಯ್ಕ ಬೆಳಕೆ, ದೇವರಾಜ ಗೋಂಡ, ರಾಮು ಮರಾಠಿ. ವಿನೋದ ನಾಯ್ಕ ಯಲ್ ಕೊಡಗಿ, ಮಂಜುನಾಥ ಮರಾಠಿ ಭಟ್ಕಳ ಮುಂತಾದ ಕರ‍್ಯಕರ್ತರು ಉಪಸ್ಥಿತರಿದ್ದರು.
ಶ್ಲಾಘನೆ:
ಪರಿಸರ ಪೂರ್ವ ಕರ‍್ಯಕ್ರಮವನ್ನು ಹಮ್ಮಿಕೊಂಡ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರಿಗೆ ಅರಣ್ಯವಾಸಿಗಳ ಪರವಾಗಿ ಅಭಿನಂದಿಸಿ ಪರಿಸರ ಜಾಗೃತೆ ಕರ‍್ಯ ಕುರಿತು ಸ್ವಾಮೀಜಿಯವರು ಶ್ಲಾಘಿಸಿದರು.