ಶಿರಸಿ-ಹಿಂದುತ್ವದ ಬಗ್ಗೆ ನೇರ ಮಾತನಾಡುವ ಯತ್ನಾಳ್ ಮೇಲಿನ ಕ್ರಮವನ್ನು ಬಿಜೆಪಿ ಮರುಪರಿಶೀಲನೆ ಮಾಡಬೇಕು’ ಎಂದು ಪ್ರಮೋದ ಮುತಾಲಿಕ್ ಆಗ್ರಹಿಸಿದರು.ಯತ್ನಾಳ್ ಮಾತಿನಿಂದ ಬಿಜೆಪಿಗೆ ಮುಜುಗರವಾಗಬಹುದು. ಆದರೆ, ಉತ್ತರ ಕರ್ನಾಟಕದ ಪ್ರಭಾವಿ ಹಿಂದೂ ಮುಖಂಡ ಯತ್ನಾಳ ಉಚ್ಚಾಟನೆ ಯಿಂದ ಮುಂದೆ ಬಿಜೆಪಿಗೆ ಬಹಳ ದೊಡ್ಡ ನಷ್ಟವಾಗಲಿದೆ ಎಂದರು. ವಾಸ್ತವವನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಬೆಳವಣಿಗೆಯಲ್ಲಿ ನನ್ನದೂ ಪಾತ್ರವಿದೆ. ಬಿಜೆಪಿಯ ಬೀಜ ಇಲ್ಲದ ಜಿಲ್ಲೆಯಲ್ಲಿ ದೊಡ್ಡ ಗೆಲುವು ತಂದುಕೊಟ್ಟವ ನಾನು’ ಎಂದು ಹೇಳಿದರು. `ಕಾಂಗ್ರೆಸ್ ಅಧಪಥನವಾಗುತ್ತಿದೆ. ಆ ವೇಳೆ ಬಿಜೆಪಿ ಜಾಗೃತವಾಗಬೇಕು. ಗಲಾಟೆಗೆ ಅವಕಾಶಕೊಡಬಾರದು’ ಎಂದು ಸಲಹೆ ನೀಡಿದರು.
ಹುಬ್ಬಳ್ಳಿಯ ನೇಹಾ ಹೀರೇಮಠ್ ಅವರನ್ನು ಪಯಾಜ್ ಹತ್ಯೆ ನಡೆಸಿ ಒಂದು ವರ್ಷವಾಗಿದೆ. ಈ ಹಿನ್ನಲೆ ಜನಾಂದೋಲನ ರೂಪಿಸುವುದಕ್ಕಾಗಿ ಶ್ರೀರಾಮ ಸೇನೆ ಸಾವಿರ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಲು ನಿರ್ಧರಿಸಿದೆ.
ಶಿರಸಿಗೆ ಆಗಮಿಸಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. `ಲವ್ ಜಿಹಾದ್ ಕುರಿತ ಎರಡನೇ ಆವೃತ್ತಿಯ ಪುಸ್ತಕವನ್ನು ಅವರು ಈ ವೇಳೆ ಬಿಡುಗಡೆ ಮಾಡಿದರು. `ಹುಬ್ಬಳ್ಳಿಯ 19 ವರ್ಷದ ನೇಹಾ ಹೀರೇಮಠ್ ಎಂಬ ಅಮಾಯಕ ಹುಡುಗಿಯ ಕೊಲೆ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ನೇಹಾ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದರು. ಮೂರು ತಿಂಗಳಿನಲ್ಲಿ ಆರೋಪಿಗೆ ಶಿಕ್ಷೆ ಕೊಡಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ, ಕೊಲೆ ನಡೆದು 11 ತಿಂಗಳಾದರೂ ಏನೂ ಆಗಿಲ್ಲ’ ಎಂದು ಪ್ರಮೋದ ಮುತಾಲಿಕ್ ಆಕ್ರೋಶವ್ಯಕ್ತಪಡಿಸಿದರು.
`ಏಪ್ರಿಲ್ 18ಕ್ಕೆ ನೇಹಾ ಕೊಲೆಯಾಗಿ 1 ವರ್ಷ ಆಗಲಿದೆ. ಮುಖ್ಯಮಂತ್ರಿ ಮಾತಿಗೆ ಬದ್ಧತೆ ಇಲ್ಲ. ಅವರು ನುಡಿದಂತೆ ನಡೆದಿಲ್ಲ’ ಎಂದು ದೂರಿದರು. ಏಪ್ರಿಲ್ 18ರಂದು ಕಿತ್ತೂರು ರಾಣಿ ಚನ್ನಮ್ಮ ಜಯಂತಿಯಿದೆ. ರಾಣಿ ಅಬ್ಬಕ್ಕನ ಜಯಂತಿ ಸಹ ಅದೇ ದಿನ’ ಎಂದು ನೆನಪಿಸಿದರು. ಇನ್ನು ಮುಂದೆ ಮಹಿಳೆಯರ ಬಗ್ಗೆ ಅಪಪ್ರಚಾರ, ಅಪಮಾನ, ಅತ್ಯಾಚಾರ ನಡೆದರೆ ತ್ರಿಶೂಲದಿಂದ ಉತ್ತರ ಕೊಡುವುದು ನಿಶ್ಚಿತ’ ಎಂದು ಎಚ್ಚರಿಸಿದರು. `2019, 2020 ಹಾಗೂ 2021ರಲ್ಲಿ ಇಡೀ ದೇಶದಲ್ಲಿ 13 ಲಕ್ಷ ಹುಡುಗಿಯರು ಕಾಣೆಯಾಗಿದ್ದಾರೆ. ಅದರಲ್ಲಿ ಲವ್ ಜಿಹಾದ್ ಪ್ರಕರಣ ಬಹಳ ದೊಡ್ಡ ಪ್ರಮಾಣದಲ್ಲಿದೆ’ ಎಂದು ಅಭಿಪ್ರಾಯವ್ಯಕ್ತಪಡಿಸಿದರು.