ಯಂಗ್ ಸ್ಟಾರ್ ವೆಲ್ಫೇರ್ ಆರ್ಗನೈಸೇಷನ್ ಮತ್ತು ರೆಡ್ ಕ್ರಾಸ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ಭಟ್ಕಳದ ಮದೀನ ಕಾಲೋನಿಯಲ್ಲಿ ಬ್ರಹತ್ ರಕ್ತದಾನ ಶಿಬಿರ
ಭಟ್ಕಳ-ಯಂಗ್ ಸ್ಟಾರ್ ವೆಲ್ಫೇರ್ ಆರ್ಗನೈಸೇಷನ್ ಮತ್ತು ರೆಡ್ ಕ್ರಾಸ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ಮದೀನ ಕಾಲೋನಿ ಮೈದಿನ್ ಸ್ಟ್ರೀಟ್ ಯಂಗ್ ಸ್ಟಾರ್ ಹಾಲಿನಲ್ಲಿ ರವಿವಾರ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ 80ಕ್ಕೂ ಹೆಚ್ಚು ಜನರು ರಕ್ತದಾನವನ್ನು ಮಾಡಿದರು. ಈ ಶಿಬಿರವನ್ನು ಯಂಗ್ಸ್ಟರ್ ವೆಲ್ಫೇರ್ ಅಸೋಸಿಯೇಷನ್ ರವರ ಸೋಶಿಯಲ್ ಸೆಕ್ರೆಟರಿ ಸಮಿಉಲ್ಲಾ ಶೇಕ್, ಮೊಮ್ಮದ್ ರಫೀಕ್ ಮೂಲಾನ, ಜಹೀರ್ ಅಹ್ಮದ್ ಶೇಕ್, ಅಬ್ದುಲ್ ಸಬ್ಹಾನ್, ಮತ್ತು ಭಟ್ಕಳ ಯೂಥ್ ಫೆಡರೇಶನ್ ಅಧ್ಯಕ್ಷರಾದ ಮೌಲಾನ ಅಜೀಜುರಹ್ಮಾನ್ ರುಕ್ನುದ್ದೀನ್ ರವರು ಉಪಸ್ಥಿತರಿದ್ದು , ರಕ್ತಧಾನ ಶಿಬಿರವನ್ನು ಆಯೋಜಿಸಿದ್ದರು.