ಲೋಕಸಭಾ ಚುನಾವಣೆ ದಿನಾಂಕ ಪ್ರಕಟ- ಏಪ್ರಿಲ್ 19 ರಿಂದ ಜೂನ್ 1 ರವರೆಗೆ 7 ಹಂತದಲ್ಲಿ ಮತದಾನ
ನವದೆಹಲಿ: ಬಹು ನಿರೀಕ್ಷಿತ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಚುನಾವಣೆ ಆಯೋಗ ಶನಿವಾರ 2024 – 2029ರ ಅವಧಿಯ ಲೋಕಸಭೆಗಾಗಿ ಚುನಾವಣೆ ದಿನಾಂಕವನ್ನು ಪ್ರಕಟಿಸಿದೆ.
ಮುಖ್ಯ ಚುನಾವಣೆ ಆಯುಕ್ತ ರಾಜೀವ ಕುಮಾರ ಗುಪ್ತಾ ಪತ್ರಿಕಾಗೋಷ್ಟಿಯಲ್ಲಿ ಚುನಾವಣೆಯ ಪೂರ್ಣ ಮಾಹಿತಿಯನ್ನು ನೀಡಿದರು. ದೇಶದ ಒಟ್ಟೂ 543 ಕ್ಷೇತ್ರಗಳಿಗೆ ಹಾಗೂ ಕರ್ನಾಟಕದಲ್ಲಿ 28 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಲೋಕಸಭೆ ಚುನಾವಣೆ ಮೊದಲ ಹಂತ 21 ರಾಜ್ಯಗಳಲ್ಲಿ ಏಪ್ರಿಲ್ 19, 2ನೇ ಹಂತ ಏಪ್ರಿಲ್ 26, 3ನೇ ಹಂತ ಮೇ 7ರಂದು ಮತದಾನ ನಡೆಯಲಿದೆ. 4ನೇ ಹಂತ ಮೇ 13, 5ನೇ ಹಂತ ಮೇ 20ರಂದು ಮತದಾನ ನಡೆಯಲಿದೆ. 6ನೇ ಹಂತ ಮೇ 25ರಂದು, 7ನೇ ಹಂತ ಜೂನ್ 1 ಮತದಾನ ನಡೆಯಲಿದೆ.
ಕರ್ನಾಟಕದಲ್ಲಿ 2ನೇ ಹಂತ ಏಪ್ರಿಲ್ 26 ಮತ್ತು 4ನೇ ಹಂತದಲ್ಲಿ ಮೇ 7ರಂದು ಮತದಾನ ನಡೆಯಲಿದೆ. ದಕ್ಷಿಣ ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಉತ್ತರ ಕರ್ನಾಟಕದಲ್ಲಿ ಮೇ 7ರಂದು ಚುನಾವಣೆ ನಡೆಯಲಿದೆ. ಜೂನ್ 4ರಂದು ರಾಷ್ಟ್ರಾದ್ಯಂತ ಮತ ಎಣಿಕೆ ನಡೆಯಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 4 ನೇ ಹಂತದ ಮತದಾನ, ಮೇ.7 ರಂದು ಚುನಾವಣೆ ನಡೆಯಲಿದೆ.