ದೇವಸ್ಥಾನದ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ರಥ ಎಳೆಯುವ ವೇಳೆ ಐದು ವರ್ಷದ ಮಗುವೊಂದು ರಥದ ಚಕ್ರದಡಿ ಸಿಲುಕಿ ಸಾವು
ದೇಶಿ ಸುದ್ಧಿ-ಕೊಲ್ಲಂ ಸಮೀಪದ ಪ್ರಸಿದ್ಧ ಕೊಟ್ಟನ್ಕುಳಂಗರ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವದ ವೇಳೆ ಐದು ವರ್ಷದ ಮಗುವೊಂದು ರಥದ ಚಕ್ರದಡಿ ಸಿಲುಕಿ ರವಿವಾರ ರಾತ್ರಿ ಮೃತಪಟ್ಟ ಘಟನೆ ವರದಿಯಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭಕ್ತರು ಎಳೆಯುವ ರಥದ ದೊಡ್ಡ ಚಕ್ರಗಳ ಅಡಿಯಲ್ಲಿ ಆಕಸ್ಮಿಕವಾಗಿ ಬಿದ್ದು, ಚವರ ನಿವಾಸಿ ದಂಪತಿಯ ಪುತ್ರಿ ಕ್ಷೇತ್ರ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 24 ರಂದು ರಾತ್ರಿ 11.30 ರ ಸುಮಾರಿಗೆ ರಥ ಎಳೆಯುತ್ತಿದ್ದ ಬಯಲಿನಲ್ಲಿ ಈ ಘಟನೆ ನಡೆದಿದೆ ಮಗು ತನ್ನ ಹೆತ್ತವರೊಂದಿಗೆ ದೇವಸ್ಥಾನಕ್ಕೆ ಬಂದಿದ್ದಳು” ಎಂದು ಪೊಲೀಸರು ತಿಳಿಸಿದ್ದಾರೆ.ರಥ ಎಳೆಯುವ ಸಂದರ್ಭದಲ್ಲಿ ಜನರ ನೂಕುನುಗ್ಗಲು ಉಂಟಾಗಿದ್ದು ಈ ವೇಳೆ ತಂದೆಯ ಕೈ ಯಿಂದ ಮಗು ಆಕಸ್ಮಿಕವಾಗಿ ಕೆಳಗೆ ಬಿದ್ದಿರುವುದಾಗಿ ತಿಳಿದು ಬಂದಿದೆ.
ಮಗುವನ್ನು ಪೋಷಕರು ಪೊಲೀಸರ ಸಹಾಯದೊಂದಿಗೆ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದದರೂ, ಉಳಿಸಿಕೊಳ್ಲಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮನೋರಮ ವೆಬ್ ತಾಣ ವರದಿ ಪ್ರಕಟಿಸಿದೆ.