ಸಂವಿಧಾನವನ್ನು ಬದುಕಿಗಾಗಿ ಓದಿ:ಎಸ್.ಬಿ.ಹೆಳವರ
ಬಾಗಲಕೋಟೆ:ಇಲಕಲ್ಲ ತಾಲೂಕಿನ ಕೆಲೂರ ಗ್ರಾಮದ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆ ಕೆಲೂರಿನಲ್ಲಿ ಸಂವಿಧಾನ ದಿನವನ್ನು ‘ಭಾರತ-ಪ್ರಜಾಪ್ರಭುತ್ವದ ತಾಯಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಬೆಳಿಗ್ಗೆ 11 ಕ್ಕೆ ಆಚರಿಸಲಾಯಿತು.
ಇಂದು ಸಂವಿಧಾನ ದಿನ ಆಚರಣೆ ಹಿನ್ನೆಲೆ, ಶಾಲೆಯ ಮುಖ್ಯೋಪಾಧ್ಯಾಯರು ಸೇರಿದಂತೆ ಎಲ್ಲ ಸಿಬ್ಬಂದಿವರ್ಗದವರು ಶಾಲೆಯ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ಕೋರಿದರು.
1949ರ ನವೆಂಬರ್ 26ರಂದು ಭಾರತದ ಸಂವಿಧಾನವನ್ನು ಅಂದಿನ ಸಂವಿಧಾನ ಸಭೆ ಅಂಗೀಕರಿಸಿತು. ನಮ್ಮ ಸಂವಿಧಾನದ ಸದಾಶಯಗಳನ್ನು ಸಂರಕ್ಷಿಸುವ ಹಾಗೂ ಪಾಲಿಸುವ ದೃಢನಿಶ್ಚಯದೊಂದಿಗೆ , ಸಂವಿಧಾನದ ಕರ್ತೃಗಳನ್ನು ಸ್ಮರಿಸಿ, ಸಂವಿಧಾನಕ್ಕೆ ಸದಾ ಬದ್ಧವಾಗಿರುವ ಸಂಕಲ್ಪವನ್ನು ಮಾಡೋಣ. ಸಂವಿಧಾನ ನಮ್ಮ ದೇಶದ ಅತ್ಯುನ್ನತ ಪವಿತ್ರ ಗ್ರಂಥ. ನಾವು ಸಂವಿಧಾನವನ್ನು ಪಾಲನೆ ಮಾಡದೇ ಇದ್ದರೆ, ಶ್ರೇಷ್ಠ ಗ್ರಂಥಕ್ಕೆ ಅಗೌರವ ನೀಡಿದಂತೆ ಎಂದು ಪ್ರ.ಮುಖ್ಯೋಪಾಧ್ಯಾಯರಾದ ಎಸ್.ಬಿ.ಹೆಳವರ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳ ಜೊತೆ ಶಿಕ್ಷಕರು ಹಾಗೂ ಎಲ್ಲ ಸಿಬ್ಬಂದಿಯವರು ಸಂವಿಧಾನದ ಪೀಠಿಕೆಯನ್ನು ಓದಲಾಯಿತು.ಶಿಕ್ಷಕರಾದ ಬಿ.ಹೆಚ್.ನಾಲತವಾಡ ನಿರೂಪಿಸಿದರು,ಎಮ್.ಹೆಚ್.ಗ್ಬಾಗೇರಿ ಸ್ವಾಗತಿಸಿದರು,ಬಿ.ಎಸ್.ಕಮತರ ವಂದಿಸಿದರು.ದೈಹಿಕ ಶಿಕ್ಷಕರಾದ ಕುಶ ಬೀಳಗಿ,ಶಿಕ್ಷಕಿಯಾರಾದ ಶ್ರೀಮತಿ ಪಿ.ಎನ್.ಸಂಗಾನವರ,ಸಿಬ್ಬಂದಿಯವರಾದ ಆಯ್.ಎಸ್.ಮಂಡಿ,ಎಸ್.ಬಿ.ನಾಯ್ಕರ ಉಪಸ್ಥಿತರಿದ್ದರು.
ವರದಿ:ಶರಣಪ್ಪ.ಬಿ.ಹೆಚ್.ಬಾಗಲಕೋಟೆ