ಕಾನೂನು ಉಲ್ಲಂಘನೆ ಮಾಡಿದ್ರೆ ಮಹಾರಾಷ್ಟ್ರದ ಸಚಿವರ ಮೇಲೂ ಕ್ರಮ- ಸಚಿವ ಆರಗ ಜ್ಞಾನೇಂದ್ರ
ಬೆಂಗಳೂರು: ಮಹಾರಾಷ್ಟ್ರ ದ ಸಚಿವರು ಕಾನೂನು ಉಲ್ಲಂಘನೆ ಮಾಡಿದರೆ ಅವರ ಮೇಲೂ ಕ್ರಮ ತೆಗೆದುಕೊಳ್ತೀವಿ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಮಹಾರಾಷ್ಟ್ರದ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ.ಬೆಳಗಾವಿ ಗೆ ಆಗಮಿಸುತ್ತಿರೋ ಮಹಾರಾಷ್ಟ್ರದ ಸಚಿವರ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾರೇ ಕಾನೂನು ಉಲ್ಲಂಘನೆ ಮಾಡಿದರೂ ಅವರ ಮೇಲೆ ಕ್ರಮ ತಗೋತೀವಿ. ಅವರು ಸಚಿವರು ಆದರೂ ಬಿಡೋದಿಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ.ಈಗಾಗಲೇ ಸಿಎಂ ಅವರು ಇದರ ಬಗ್ಗೆ ಸಂಪೂರ್ಣವಾಗಿ ಹೇಳಿದ್ದಾರೆ.
ಈಗಾಗಲೇ ನಮ್ಮ ರಾಜ್ಯ-ಮಹಾರಾಷ್ಟ್ರದ ಡಿಜಿಗಳು, ಎಡಿಜಿಪಿಗಳ ಮೀಟಿಂಗ್ ನಡೆದಿದೆ. ಭಾವನಾತ್ಮಕವಾಗಿ ಏನಾದರೂ ಕೆಣಕಲು ಬಂದರೆ ನಾವು ಬಿಡೊಲ್ಲ. ಈ ಬಗ್ಗೆ ಪೊಲೀಸರು ಎರಡು ಭಾಗದ ಜನರಿಗೆ ಎಚ್ಚರಿಕೆ ನೀಡಿದ್ದಾರೆ ಅಂತ ತಿಳಿಸಿದರು. ಕೋರ್ಟ್ ನಲ್ಲಿ ಕೇಸ್ ಇದೆ. ಹೀಗಿರುವಾಗ ಅನಾವಶ್ಯಕ ಗೊಂದಲ, ಶಾಂತಿ ಸುವ್ಯವಸ್ಥೆ ಹಾಳು ಮಾಡೋದು ಸರಿಯಲ್ಲ. ನೆಲ ಜಲ, ಭಾಷೆ ಬಗ್ಗೆ ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ಸಚಿವರು ಬಂದೆ ಏನ್ ಕ್ರಮ ತಗೋತೀವಿ ಅಂತ ಸಿಎಂ ಜೊತೆ ಮಾತಾಡ್ತೀನಿ. ಬೆಳಗಾವಿ ಈಗ ಶಾಂತಿಯುತವಾಗಿದೆ. ಅದನ್ನ ಹಾಳು ಮಾಡಬಾದರು. ಅದು ಯುದ್ದ ರಂಗ ಅಲ್ಲ. ಎಲ್ಲರೂ ಶಾಂತವಾಗಿರಬೇಕು. ಇಲ್ಲಿಂದ ಅಲ್ಲಿಗೆ ಜನರು ಹೋಗಿ, ಅಲ್ಲಿಂದ ಇಲ್ಲಿಗೆ ಜನರು ಬಂದು ಕುಸ್ತಿ ಆಡಬಾರದು. ನೆಲ, ಜಲ, ಭಾಷೆಗೆ ನಮ್ಮ ಬದ್ಧತೆ ಇದೆ. ಯಾರೇ ಕಾನೂನು ಉಲ್ಲಂಘನೆ ಮಾಡಿದ್ರೆ ಕ್ರಮ ಆಗುತ್ತೆ ಎಂದರು.ನಮ್ಮ ಮುಖ್ಯ ಕಾರ್ಯದರ್ಶಿಗಳು ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಎರಡು ರಾಜ್ಯಗಳು ಶಾಂತಿ ಸುವ್ಯವಸ್ಥೆ ಕಾಪಾಡಲು ನಾನೂ ಮನವಿ ಮಾಡ್ತೀವಿ. ಬೆಳಗಾವಿ ರಣರಂಗ ಆಗಬಾರದು. ಅದಕ್ಕೆ ನಾವು ಅವಕಾಶ ಕೊಡೊಲ್ಲ ಎಂದು ಸ್ಪಷ್ಟಪಡಿಸಿದರು.