ಭೀಕರ ರಸ್ತೆ ಅಪಘಾತದಲ್ಲಿ
ಸಿಂದಗಿ ತಾಲೂಕಿನ ಸಿಪಿಐ ಮತ್ತು ಸಿಪಿಐ ಪತ್ನಿ ಸಾವು
ಸಿಂದಗಿ-ರಸ್ತೆ ಪಕ್ಕದಲ್ಲಿ ನಿಂತಿದ್ದ ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸಿಪಿಐ ಹಾಗೂ ಸಿಪಿಐ ಪತ್ನಿ ಸಾವಿಗೀಡಾಗಿರುವ ಘಟನೆ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಬಳಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಸಾವನ್ನಪ್ಪಿದವರನ್ನು ಸಿಪಿಐ ರವಿ ಉಕ್ಕುಂದ (43),ಪತ್ನಿ ಮಧು (40) ಎಂದು ಗುರುತಿಸಲಾಗಿದೆ.
ಸಿಂದಗಿಯಿಂದ ಕಲಬುರಗಿ ನಗರಕ್ಕೆ ಕಾರಿನಲ್ಲಿ ಆಗಮಿಸುತ್ತಿದ್ದ ಸಿಪಿಐ ದಂಪತಿಗಳು, ಕಂಟೇನರ್ ಢಿಕ್ಕಿ ಹೊಡೆದ ಪರಿಣಾಮ ಅಫಘಾತ ಸಂಭವಿಸಿದೆ. ಸ್ಥಳಕ್ಕೆ ಹಿರಿಯ ಪೋಲಿಸ್ ಅಧಿಕಾರಿಗಳು ದೌಡಾಯಿಸಿದ್ದು, ನೆಲೋಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.