ಭಟ್ಕಳದಲ್ಲಿ ಅಕ್ರಮ ಮಣ್ಣು ಸಾಗಾಟ ಸುದ್ದಿ ಬಿತ್ತರಿಸಿದ ವೆಬ್ ಪೋರ್ಟಲ್ ಸಂಪಾದಕ ಜಿವೋತ್ತಮ ಪೈ ಗೆ ಜೀವ ಬೆದರಿಕೆ ಹಾಕಿದ ಅಕ್ರಮ ದಂದೇಕೊರರನ್ನು ಪೊಲೀಸರು ಬಂದಿಸುವಂತೆ ಕೆ.ಆರ್.ಎಸ್ ಪಕ್ಷದ ರಾಜ್ಯ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಆಗ್ರಹ
ಉತ್ತರ ಕನ್ನಡ- ರಾಜ್ಯದ ನಾನಾ ಕಡೆಗಳಲ್ಲಿ ಭ್ರಷ್ಟ ರಾಜಕಾರಣಿಗಳು ಮತ್ತು ಭ್ರಷ್ಟ ಪೊಲೀಸ್ ಅಧಿಕಾರಿಗಳು ಕುಮ್ಮುಕು ಮತ್ತು ಸಹಾಯದಿಂದ ಅಕ್ರಮ ಗಣಿಗಾರಿಕೆ , ಅಕ್ರಮ ಮಣ್ಣು ಸಾಗಾಟ , ಕಲ್ಲು ಸಾಗಾಟ ಅನೇಕ ಅಕ್ರಮ ಚಟುವಟಿಕೆಗಳು ರಜಾರೋಷವಾಗಿ ನಡೆಯುತ್ತಿದೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲೂ ಸಹ ಭ್ರಷ್ಟ ಅಧಿಕಾರಿಗಳು ಮತ್ತು ಕಡು ರಾಜಕಾರಣಿಗಳ ಕುಮ್ಮುಕು ಮತ್ತು ಸಹಾಯದಿಂದ ಯಾರ ಭಯವಿಲ್ಲದೆ ಅಕ್ರಮ ದಂದೇಗಳು ರಾಜಾರೋಷವಾಗಿ ನಡೆಯುತ್ತಿದೆ.
ಗುರುವಾರ ಅಕ್ರಮ ಮಣ್ಣು ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಹಸೀಲ್ದಾರ್ ದಾಳಿ ಮಾಡಿ ಹಿಡಿದು ಪೊಲೀಸರಿಗೆ ನೀಡಿದ ಸುದ್ದಿಯನ್ನು ತಮ್ಮ ವೆಬ್ ಪೋರ್ಟಲ್ ನಲ್ಲಿ ಬಿತ್ತರಿಸಿದ ಸಂಪಾದಕ ಜೇವೋತ್ತಮ್ ಪೈ ಅವರಿಗೆ ಅಕ್ರಮ ದಂದೇ ಕೋರರ ಜೀವ ಬೆದರಿಕೆ ಹಾಕಿ ಹಲ್ಲೆಗೆ ಮುಂದಾದ ಘಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಅವರು ಕನ್ನಡ ಟುಡೇ ನ್ಯೂಸ್ ಗೆ ಪ್ರತಿಕ್ರಿಯಿಸಿ ತಿಳಿಸಿದ್ದಾರೆ. ಭಟ್ಕಳ್ ಪೊಲೀಸ್ ಅಧಿಕಾರಿಗಳು ಈ ಕೂಡಲೇ ಜೇವೋತ್ತಮ ಪೈ ಗೆ ಜೀವ ಬೆದರಿಕೆ ಹಾಕಿದ ದಂದೇ ಕೋರರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈ ಗೊಳಬೇಕು ಮತ್ತು ಪತ್ರಕರ್ತನಿಗೆ ಭದ್ರತೆ ನೀಡಬೇಕು ಎಂದು ತಿಳಿಸಿದ್ದಾರೆ.ಅಕ್ರಮ ದಂದೇ ಗಳನ್ನು ಪೋಲಿಸ ಅಧಿಕಾರಿಗಳು ತಡೆಯಬೇಕು ಎಂದು ತಿಳಿಸಿದ್ದಾರೆ.