ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿಗೆ ವಿಜಯಪುರ NPS ನೌಕರರಿಂದ ಘೇರಾವು
ವಿಜಯಪುರ -ಇಂದು ವಿಜಯಪುರ ನಗರಕ್ಕೆ ಆಗಮಿಸಿದ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಅಧ್ಯಕ್ಷ ಸಿ.ಎಸ್ . ಷಡಕ್ಷರಿ ಅವರಿಗೆ ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು *ಮಾಡು ಇಲ್ಲವೇ ಮಡಿ NPS ಹೋರಾಟದ* ಕುರಿತು ಹಗುರವಾಗಿ ಮಾತನಾಡಿ ಹೋರಾಟದ ಬಲವನ್ನು ತಗ್ಗಿಸಲು ಪ್ರಯತ್ನಿಸುತ್ತಿರುವುದನ್ನು ಖಂಡಿಸಿ ಇಂದು ವಿಜಯಪುರ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಸಿ.ಎಸ್. ಷಡಕ್ಷರಿಯವರ ವಿರುದ್ಧ NPS ಪರ ಹೋರಾಟಗಾರ ನೌಕರರರು ಘೋಷಣೆಗಳನ್ನು ಕೂಗುತ್ತ ಘೆರಾವ ಹಾಕಿದರು.ನಂತರ ಮಾತನಾಡಿ ಸಾದ್ಯವಾದರೇ ಹೋರಾಟವನ್ನು ಬೆಂಬಲಿಸಬೇಕು ,ಇಲ್ಲವಾದರೆ ಸುಮ್ಮನಿರಬೇಕೆಂದು ಹೇಳುತ್ತ NPS ಘೋಷನೆಗಳ ಮೂಲಕ ಕಡಕಾಗಿ ತಮ್ಮ ಸಂದೇಶವನ್ನು ತಿಳುಸಿದರು.