ಜ.14,15 ಹಾಗೂ 16 ರಂದು ಸಿದ್ಧನಕೊಳ್ಳದ ಮಹಾ ರಥೋತ್ಸವ:ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಂಭ್ರಮ..!
ಬಾಗಲಕೋಟೆ:ನಿರಂತರ ದಾಸೋಹ ಮತ್ತು ಕಲಾ ಪೋಷಕರ ಮಠವಾಗಿರುವ ಜಿಲ್ಲೆಯ ಇಳಕಲ್ಲ ತಾಲೂಕಿನ ಸಿದ್ದನಕೊಳ್ಳದ ಸಿದ್ದಶ್ರೀ ರಾಷ್ಟ್ರೀಯ ಉತ್ಸವ ಜ.14 ರಿಂದ ಮೂರು ದಿನ ನಡೆಯಲಿದೆ ಎಂದು ಶ್ರೀಮಠದ ಪೀಠಾಧಿಪತಿ ಶಿವುಕುಮಾರ ಸ್ವಾಮೀಜಿ ಹೇಳಿದರು.
ದಿನಾಂಕ 14-01-2023 ರಿಂದ 16-01- 2023 ರವರೆಗೆ ಸಿದ್ಧಶ್ರೀ ರಾಷ್ಟ್ರೀಯ ಉತ್ಸವ ಹಾಗೂ ಅಂತರಾಷ್ಟ್ರೀಯ ಚಲನಚಿತ್ರೋತ್ಸವ-2023 ಹಮ್ಮಿಕೊಳ್ಳಲಾಗಿದೆ..!
ಡಾ.ಶಿವಕುಮಾರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರಗುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತನಾಮರು ಭಾಗವಹಿಸುವರು. ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರು ಹಾಗೂ ಶಾಸಕರು ಪ್ರಮುಖ ಕಲಾವಿದರು ಭಾಗವಹಿಸಲಿದ್ದಾರೆ. ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೆಲ ಚಲನಚಿತ್ರಗಳು ಬಿಡುಗಡೆ ಕೂಡಾ ನಡೆಯಲಿವೆ.
ಹೆಲಿಕ್ಯಾಪ್ಟರ್ ಸೇವೆ : ಪ್ರತಿ ವರ್ಷದಂತೆ ಈ ವರ್ಷವು ಸಿದ್ಧನಕೊಳ್ಳದ ಮಹಾತಪಸ್ವಿ ಪರಮಪೂಜ್ಯ ಲಿಂಗೈಕ್ಯ ಸಿದ್ದಪ್ಪಪ್ಪಜ್ಜನವರ ಕತೃ ಗದ್ದುಗೆಗೆ ಮಹಾ ರಥೋತ್ಸವದ ದಿನದಂದು ಹೇಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚಣೆ ವಿಶೇಷ ಕಾರ್ಯಕ್ರಮ ಜರಗುವುದು.