ಹೆಂಡತಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ಆಕೆಯನ್ನು ಉಸಿರುಗಟ್ಟಿಸಿ ಕೊಂದು, ಎಸ್ಕೇಪ್ ಆದ ಪತಿರಾಯ ನಾಸಿರ್ ಹುಸೇನ್
ಬೆಂಗಳೂರು-ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಲ್ಲದೆ ಆಕೆಯನ್ನು ಉಸಿರುಗಟ್ಟಿಸಿ ಕೊಂದು, ಅವಳ ಅಣ್ಣನಿಗೆ ಮೆಸೇಜ್ ಮಾಡಿ ಪತಿ ಎಸ್ಕೇಪ್ ಆದ ಪ್ರಕರಣವೊಂದು ನಡೆದಿದೆ. ಬೆಂಗಳೂರಿನ ತಾವರೆಕೆರೆಯಲ್ಲಿ ಈ ಪ್ರಕರಣ ನಡೆದಿದೆ.
ತಾವರೆಕೆರೆಯ ಸುಭಾಷ್ನಗರದ ಫ್ಲ್ಯಾಟ್ನಲ್ಲಿ ಈ ಕೊಲೆ ನಡೆದಿದೆ.
ನಾಜ್ (22) ಕೊಲೆಗೀಡಾದ ಯುವತಿ. ಪತಿ ನಾಸಿರ್ ಹುಸೇನ್ ಕೊಲೆ ಆರೋಪಿ. ಕಳೆದ 6 ತಿಂಗಳ ಹಿಂದೆ ಫ್ಲ್ಯಾಟ್ನಲ್ಲಿ ಈ ದಂಪತಿ ವಾಸವಿದ್ದರು.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಾಸೀರ್ ಹುಸೇನ್, ಪತ್ನಿ ಶೀಲ ಶಂಕಿಸಿ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ ಆಕೆಯ ಅಣ್ಣನಿಗೆ ಮೆಸೇಜ್ ಕಳಿಸಿ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಸುದ್ದುಗುಂಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.