8 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಪುರಸಭೆ ಲಂಚ ಬಾಕ , ಕಡು ಭ್ರಷ್ಟ ಕಂದಾಯ ಅಧಿಕಾರಿ ಮತ್ತುಗುಮಾಸ್ತ ಲೋಕಾಯುಕ್ತ ಬಲೆಗೆ
ಕಡೂರು- 8 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಪುರಸಭೆ ಕಂದಾಯ ಅಧಿಕಾರಿ, ಗುಮಾಸ್ತ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೀರೂರು ಪುರಸಭೆಯಲ್ಲಿ ನಡೆದಿದೆ.
ಕಂದಾಯ ಅಧಿಕಾರಿ ಯೋಗೀಶ್, ಗುಮಾಸ್ತ ತಮ್ಮಯ್ಯ ಲೋಕಾಯುಕ್ತ ಬಲೆಗೆ ಬಿದ್ದವರಾಗಿದ್ದಾರೆ. ಜಮೀನಿನ ಪೌತಿ ಖಾತೆ ಮಾಡಿಕೊಡಲು 8 ಸಾವಿರ ಲಂಚಕ್ಕೆ ಇವರು ಬೇಡಿಕೆ ಇಟ್ಟಿದ್ದರು.
ಅಮಾಯರಿಂದ ಲಂಚ ಪಡೆಯುತ್ತಿದ್ದ ವೇಳೆ ಬೀರೂರು ಪುರಸಭೆ ಕಚೇರಿ ಒಳಗೆಯೇ ಲಂಚಬಾಕರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಲೋಲಾಯುಕ್ತ ಡಿ.ವೈ.ಎಸ್ಪಿ, ತಿರುಮಲೇಶ್, ಪಿ.ಎಸ್.ಐ. ಅನಿಲ್ ರಾಥೋಡ್ ನೇತೃತ್ವದಲ್ಲಿ ದಾಳಿ ನಡೆಸಿ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ.
ರಾಜ್ಯದಲ್ಲಿ ಲೋಕಾಯುಕ್ತ ಚುರುಕುಗೊಂಡಿದ್ದು, ಉತ್ತಮ ಸರ್ಕಾರಿ ಸಂಬಳ ಇದ್ದೂ ಕೂಡ ಲಂಚಕ್ಕೆ ಕೈಚಾಚುವ ಭ್ರಷ್ಟ ಕೈಗೆ ಕಾನೂನಿನ ಕೆಂಡ ಇಡಲು ಸಜ್ಜಾಗಿದೆ. ಕಳೆದ ಹಲವು ದಿನಗಳಿಂದ ರಾಜ್ಯದ ವಿವಧೆಡೆಗಳಲ್ಲಿ ದಾಳಿ ನಡೆಯುತ್ತಿದ್ದು, ಭ್ರಷ್ಟ ಅಧಿಕಾರಿಗಳಿಗೆ ನಡುಕ ಮತ್ತುಸಂಕಷ್ಟ ಆರಂಭವಾಗಿದೆ.