ಶ್ರೀ ಅನ್ನಪೂರ್ಣೇಶ್ವರಿ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಅದ್ದೂರಿಯ ಆರೋಗ್ಯ ಶಿಬಿರ.
ಬೆಂಗಳೂರು ನಗರದ ಪೀಣ್ಯ 2ನೇ ಹಂತದ ತಿಗಳಪಾಳ್ಯ ಕದಂಬ ನಗರದಲ್ಲಿ ಸಾರ್ವಜನಿಕರ ಹಿತಾಸಕ್ತಿಗಾಗಿ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ ಶ್ರೀ ಅನ್ನಪೂರ್ಣೇಶ್ವರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಬೃಹತ್ ಮಟ್ಟದ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿತ್ತು, ಈ ಆರೋಗ್ಯ ಶಿಬಿರದಲ್ಲಿ ನೂರಾರು ಸಾರ್ವಜನಿಕರು ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳುವ ಮುಖಾಂತರ ಹಾಗೂ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವ ಮುಖಾಂತರ ಆರೋಗ್ಯ ಶಿಬಿರವನ್ನು ಯಶಸ್ವಿಗೊಳಿಸಿದರು. ಇದೇ ಸಂದರ್ಭದಲ್ಲಿ ಆರೋಗ್ಯ ಶಿಬಿರ ಉದ್ಘಾಟನೆ ಮಾಡಿದ ಹಿರಿಯ ಪತ್ರಕರ್ತರಾದ ಎನ್.ಎಮ್. ದೇವೇಂದ್ರಪ್ಪ ನವರು ಮಾತನಾಡಿ ಶ್ರೀಮತಿ ಜಯಶ್ರೀರವರ ನೇತೃತ್ವದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಚಾರಿಟಬಲ್ ಟ್ರಸ್ಟ್ ನವರು ಸುಮಾರು ಮೂರು ವರ್ಷಗಳಿಂದಲೂ ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದ್ದು ಶ್ಲಾಘನೀಯ ವಿಚಾರ ಹಾಗೂ ಟ್ರಸ್ಟ್ ನವರ ಮಾತೃ ಹೃದಯ ಭಾವನೆಗಳ ಸಂಕೇತ ಎಂದು ಹೇಳಿದರು, ಇದೇ ಸಂದರ್ಭದಲ್ಲಿ ಖ್ಯಾತ ವಕೀಲರಾದ ಶ್ರೀಯುತ ಎಂ.ಬಿ. ನಥಫ್ ರವರಿಗೆ ಮತ್ತು ಕರ್ನಾಟಕ ರಣಧೀರರ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀಯುತ ಶಂಕರ್ ಗೌಡ್ರು.ಕೆ.ಆರ್. ರವರಿಗೆ ಮತ್ತು ಹಿರಿಯ ಪತ್ರಕರ್ತರಾದ ಎನ್.ಎಮ್. ದೇವೇಂದ್ರಪ್ಪ ರವರಿಗೆ ಜೀವಮಾನ ಆದರ್ಶ ವ್ಯಕ್ತಿತ್ವ ಸಾಧಕರು ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು, ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ರಣಧೀರರ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು ಕೆ.ಆರ್. ರವರು ಶ್ರೀ ಅನ್ನಪೂರ್ಣೇಶ್ವರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಜಯಶ್ರೀರವರು ಹಾಗೂ ಪದಾಧಿಕಾರಿಗಳು ನಮ್ಮನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ ಗೌರವಿಸಿದ್ದಕ್ಕೆ ಧನ್ಯವಾದಗಳು ತಿಳಿಸುತ್ತೇವೆ ಹಾಗೂ ನಾವು ಗಮನ ಹರಿಸಿದಂತೆ ಟ್ರಸ್ಟಿನ ಅಧ್ಯಕ್ಷರಾದ ಜಯಶ್ರೀ ರವರ ನೇತೃತ್ವದಲ್ಲಿ ಹಾಗೂ ಪದಾಧಿಕಾರಿಗಳ ಎಲ್ಲರ ಸಹಯೋಗದಲ್ಲಿ ಮುಂದಿನ ದಿನಗಳಲ್ಲಿ ಈ ನಮ್ಮ ಕನ್ನಡ ನಾಡಿಗೆ ಅನೇಕ ಸೇವೆ ಲಭಿಸಲಿ ಎಂದು ಹಾರೈಸುತ್ತಾ ಟ್ರಸ್ಟಿನ ಎಲ್ಲಾ ಸಮಾಜದ ಒಳಿತಿಗಾಗಿ ಮಾಡುವ ಕೆಲಸಗಳಿಗೆ ನಮ್ಮ ಕರ್ನಾಟಕ ರಣಧೀರರ ವೇದಿಕೆಯ ಬೆಂಬಲವು ಸಹ ಸದಾ ಇರುತ್ತದೆ ಎಂದು ಹೇಳಿದರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟಿನ ಅಧ್ಯಕ್ಷರಾದ ಜಯಶ್ರೀರವರು ಮಾತನಾಡಿ ಸಾಕಷ್ಟು ಜನ ಬಡವರು ದಲಿತರು ಕೂಲಿಕಾರ್ಮಿಕರು ಇದ್ದು ಇನ್ನು ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಸಹಾಯವನ್ನು ಮಾಡುವ ನಿಟ್ಟಿನಲ್ಲಿ ನಮ್ಮ ಟ್ರಸ್ಟ್ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಸದಾ ನೊಂದವರ ಧ್ವನಿಯಾಗಿ ಅವರ ಜೊತೆಗಿರುತ್ತೇವೆ ನಾವಿರುತ್ತೇವೆ ಎಂದು ಹೇಳಿದರು,
ಇದೇ ಸಂದರ್ಭದಲ್ಲಿ ಎಮ್.ಬಿ.ನಥಫ್ ಖ್ಯಾತ ವಕೀಲರು ತಿಮ್ಮೇಗೌಡ ಸಮಾಜ ಸೇವಕರು, ಲೋಕೇಶ್ ರವರು ಸಮಾಜ ಸೇವಕರು ಕೃಷ್ಣಪ್ಪನವರು ಸಮಾಜಸೇವಕರು, ಶ್ರೀಮತಿ ಪಾರ್ವತಿ ಯಂಟಾಗನಹಳ್ಳಿ ಸಮಾಜ ಸೇವಕರು, ಟ್ರಸ್ಟ್ ಉಪಾಧ್ಯಕ್ಷರಾದ ಪ್ರೇಮ, ಟ್ರಸ್ಟ್ ಕಾರ್ಯದರ್ಶಿ ಶ್ರೀನಿವಾಸ್, ಶ್ರದ್ಧಾ ಸಂಸ್ಥೆಯ ಮುಖ್ಯಸ್ಥರಾದ ಸ್ಟ್ಯಾಂಡ್ಲಿ ರವರು ಹಾಜರಿದ್ದರು.