ಸನಾತನ ಧರ್ಮ ನಾಶವಾಗಬೇಕೆಂದು ಹಿಂದೂ ಧರ್ಮ ವಿರೋದ ಹೇಳಿಕೆ ನೀಡಿದ ತಮಿಳನಾಡಿನ ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ವಿರುದ್ಧ ಮಹಾಲಿಂಗಪುರ ಹಿಂದೂಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
ಮಹಾಲಿಂಗಪುರ -ಸನಾತನ ಧರ್ಮ ನಾಶವಾಗಬೇಕೆಂದು ಹಿಂದೂ ಧರ್ಮ ವಿರೋದ ಹೇಳಿಕೆ ನೀಡಿದ ತಮಿಳನಾಡಿನ ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ವಿರುದ್ಧ ಸ್ಥಳೀಯ ಹಿಂದೂಪರ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ಸಂಜೆ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಮುಖಂಡರಾದ ಮನೋಹರ ಶಿರೋಳ, ಮಹಾಂತೇಶ ಹಿಟ್ಟಿನಮಠ, ಅರ್ಜುನ ಪವಾರ ಮಾತನಾಡಿ ಸನಾತನ ಹಿಂದೂ ಧರ್ಮವು ದೇವಧರ್ಮವಾಗಿದೆ. ಇದನ್ನು ಯಾರಿಂದಲೂ ನಾಶಮಾಡಲು ಸಾಧ್ಯವಿಲ್ಲ. ಸನಾತನ ಹಿಂದೂ ಧರ್ಮದ ಮಹತ್ವ, ಹಿನ್ನಲೆ, ಅದರ ಶಕ್ತಿಯನ್ನು ಅರಿಯದೇ ಸನಾತನ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಉದಯನಿಧಿ ಸ್ಟಾಲಿನ್‌ನನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಚನ್ನಮ್ಮವೃತ್ತದಲ್ಲಿ ಸೇರಿದ ಹಿಂದೂಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಉದಯನಿಧಿ ಸ್ಟಾಲಿನ್ ಭಾವಚಿತ್ರವನ್ನು ಸುಟ್ಟು, ಮಾನವ ಸರಪಳಿ ನಿರ್ಮಿಸಿ, ಮುಧೋಳ ನಿಪ್ಪಾಣಿ, ರಬಕವಿ ಜಾಂಬೋಟಿ ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡಿ, ಸ್ಟಾಲಿನ್ ವಿರುದ್ಧ ಘೋಷನೆಗಳನ್ನು ಕೂಗಿ ಪ್ರತಿಭಟಿಸಿ, ಸನಾತನ ಹಿಂದೂ ಧರ್ಮಕ್ಕೆ ಜಯವಾಗಲಿ, ಜೈಯತು ಜಯತು ಹಿಂದೂ ರಾಷ್ಟ್ರ ಎಂಬ ಘೋಷಣೆಗಳನ್ನು ಮೊಳಗಿಸಿದರು.
ಬಿಜೆಪಿ ಮುಖಂಡ ಬಸನಗೌಡ ಪಾಟೀಲ, ರವಿ ಜವಳಗಿ, ಬಸವರಾಜ ಹುಕ್ಕೇರಿ, ಮಹಾಲಿಂಗಪ್ಪ ಕಂಕನವಾಡಿ, ಶಂಕರಗೌಡ ಪಾಟೀಲ, ಶಿವು ಅಂಗಡಿ, ಹಣಮಂತ ಜಮಾದಾರ, ವಿಜಯ ಸಬಕಾಳೆ, ಸುವರ್ಣಾ ಆಸಂಗಿ, ಹಣಮಂತ ಹಿಂದೂಪರ ಸಂಘಟನೆಗಳ ಸಚಿನ ಕಲ್ಮಡಿ, ಭೈರೇಶ ಆದೆಪ್ಪನವರ, ನಂದು ಲಾತೂರ, ಶ್ರೀನಿಧಿ ಕುಲಕರ್ಣಿ, ಮಹಾಲಿಂಗ ಕಲಾಲ, ದತ್ತ ಯರಗಟ್ಟಿ, ಸಚಿನ ವಂದಾಲ, ರಾಘು ಪವಾರ, ಬಸು ಮುರಾರಿ, ಅಕ್ಷಯ ಜಳ್ಳಿ, ಆನಂದ ಬಂಡಿಗಣಿ, ತಮ್ಮಣ್ಣಿ ಆದೆಪ್ಪನವರ, ಹಣಮಂತ ನಾವ್ಹಿ, ಸಂತೋಷ ಹಜಾರೆ, ಅಭಿ ಲಮಾಣಿ, ಸುನೀಲ ರಾಮೋಜಿ, ಮಹಾಲಿಂಗ ದೇಸಾಯಿ, ಚನ್ನು ಆರೆಗಾರ, ಅಭಿ ಗರಗಟ್ಟಿ, ಸಿ.ಬಿ.ಭಜಂತ್ರಿ, ಯಲ್ಲಪ್ಪ ಬನ್ನೆನ್ನವರ, ಕೃಷ್ಣಾ ಕಳ್ಳಿಮನಿ, ಸಂಗಮೇಶ ಅಂಬಲ್ಯಾಳ, ವೀರಭದ್ರ ಮುಗಳ್ಯಾಳ, ರಾಜೇಂದ್ರ ನ್ಹಾವಿ, ಈರಪ್ಪ ಹುಣಶ್ಯಾಳ, ಚೇತನ ಬಂಡಿವಡ್ಡರ, ರಾಘು ಡಂಬಳ, ವಿಶಾಲ ಪತ್ತಾರ, ವಿನಾಯಕ ಗುಂಜಿಗಾಂವಿ, ಮಹಾಲಿಂಗ ಅವಟಗಿ, ರಘು ಕಪರಟ್ಟಿ, ಬಸು ಕೊಣ್ಣೂರ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು