ನೆಲಮಂಗಲ ತಹಸೀಲ್ದಾರ್ ಅರುಂಧದತಿ ರವರು ಭೂ ಕಳ್ಳರ ಪರ ನಿಂತರೇ?
ನೆಲಮಂಗಲ- ಕರ್ನಾಟಕ ರಣಧೀರರ ವೇದಿಕೆ ಸಂಘಟನೆಯ ಮನವಿ ಮೇರೆಗೆ ಸದರಿ ಮನವಿಗೆ ನೆಲಮಂಗಲ ತಾಲೂಕು ಗೊಲ್ಲಹಳ್ಳಿ ಗ್ರಾಮದ ಸರ್ವೆ ನಂಬರ್ 59 ರಲ್ಲಿನ ಸರ್ಕಾರಿ ಜಾಗದ ಒತ್ತುವರಿಯ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ರಾಜಸ್ವ ನಿರೀಕ್ಷಕರು ವರದಿ ನೀಡಿದ್ದು ಹಾಗೂ ತಾಲ್ಲೂಕು ಸರ್ವೆಯರ್ ಸರ್ವೇ ಮಾಡಿ ಒತ್ತುವರಿಯಾಗಿರುವುದನ್ನ ಗುರುತಿಸಿಕೊಟ್ಟಿದ್ದು, ಒತ್ತುವರಿಯಾಗಿರುವ ಪ್ರದೇಶವನ್ನು
ದಿನಾಂಕ :21/09/2023 ರಂದು ಒತ್ತುವರಿ ತೆರವುಗೊಳಿಸುವಂತೆ ನೆಲಮಂಗಲ ತಹಸೀಲ್ದಾರ್ ಆದೇಶ ಮಾಡಿ ಅವರೇ ಆದೇಶ ಪಾಲಿಸಿಲ್ಲ,
ಒತ್ತುವರಿ ತೆರವು ಮಾಡುವ ಕಾರ್ಯದ ದಿನಾಂಕ ಮುಂದಕ್ಕೆ ಹಾಕುವುದಾದರೆ ಅರ್ಜಿದಾರರಿಗೆ ಮಾಹಿತಿ ನೀಡಬೇಕು ಆದರೆ ಮಾಹಿತಿ ನೀಡಿಲ್ಲ, ಸ್ಥಳೀಯ ಪ್ರಾಧಿಕಾರವಾದ ಗೊಲ್ಲಹಳ್ಳಿ ಗ್ರಾಮ ಪಂಚಾಯತಿಗೂ ಕೂಡ ಮಾಹಿತಿ ನೀಡಬೇಕಿತ್ತು ಆದರೆ ಮಾಹಿತಿ ನೀಡಿಲ್ಲ, ಸ್ಥಳಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಬಾರದೆಂಬ ಉದ್ದೇಶಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ಪತ್ರ ಬರೆದಿದ್ದರು, ಸ್ಥಳದಲ್ಲಿ ಯಾವೊಬ್ಬರು ಪೊಲೀಸ್ ಸಿಬ್ಬಂದಿಯೂ ಕೂಡ ಹಾಜರಿರುವುದಿಲ್ಲ, ತಹಸೀಲ್ದಾರ್ ರವರು ತಿಳಿಸಿದ್ದ ದಿನಾಂಕ ಮತ್ತು ಸಮಯಕ್ಕೆ ಸ್ಥಳದಲ್ಲಿ ಹಾಜರಿದ್ದ ಅರ್ಜಿದಾರರಾದ ಕರ್ನಾಟಕ ರಣಧೀರರ ವೇದಿಕೆಯ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು.ಕೆ.ಆರ್. ರವರು ನೆಲಮಂಗಲ ತಹಸೀಲ್ದಾರ್ ಅವರಿಗೆ ಖುದ್ದು ಫೋನ್ ಕರೆ ಮಾಡಿ ತೆರವು ಕಾರ್ಯಾಚರಣೆಗೆ ನಾವುಗಳು ಹಾಜರಿದ್ದು ತಮ್ಮ ಸಿಬ್ಬಂದಿಗಳು ಹಾಗೂ ತಾವುಗಳು ಯಾರು ಕೂಡ ಸ್ಥಳಕ್ಕೆ ಏಕೆ ಬಂದಿಲ್ಲ ಎಂದು ಕೇಳಿದಾಗ ನೆಲಮಂಗಲ ತಹಸೀಲ್ದಾರ್ ಆದ ಅರುಂಧತಿ ಯವರು ಬೇರೆ ಗ್ರಾಮದ ಒತ್ತೂವರಿ ತುರ್ತಾಗಿದ್ದು ಅಲ್ಲಿಗೆ ನಮ್ಮ ಸಿಬ್ಬಂದಿಗಳು ಹೋಗಿದ್ದಾರೆ ನಾನು ನ್ಯಾಯಾಲಯದ ಕೆಲಸದ ಮೇಲೆ ನ್ಯಾಯಾಲಯಕ್ಕೆ ಬಂದಿದ್ದೇನೆ ಮುಂದಿನ ದಿನಗಳಲ್ಲಿ ತೆರವು ಮಾಡೋಣ ಬಿಡಿ ಎಂದು ಉಡಾಫೆ ಉತ್ತರ ನೀಡಿರುತ್ತಾರೆ, ಈ ನೆಲಮಂಗಲ ತಹಸೀಲ್ದಾರ್ ರಾದ ಅರುಂಧತಿ ರವರ ವರ್ತನೆ ನೋಡಿದರೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿರುವ ಭೂಗಳ್ಳರು ಹಾಗೂ ಪ್ರಭಾವಿಗಳು ಮತ್ತು ರಾಜಕೀಯ ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದರೆ ಹಲವಾರು ಅನುಮಾನಗಳಿಗೆ ಆಸ್ಪದ ನೀಡುತ್ತಿದೆ, ಅತೀ ಜರೂರಗಿ ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು ತೆರವು ಮಾಡದಿದ್ದಲ್ಲಿ ತಾಲ್ಲೂಕು ಕಚೇರಿಗೆ ಬೀಗ ಜಡಿದು ಕಚೇರಿಯ ಮುಂದೆ ಚಾಪೆ ತಿಂಬು ಚಳುವಳಿ ಮಾಡುತ್ತೇವೆಎಂದು ಹೇಳಿದರು,
ಸರ್ಕಾರಿ ಕೆರೆ,ಕಟ್ಟೆ, ಗೋಮಾಳ, ಗುಂಡುತೋಪು, ಕಾಲುದಾರಿ, ರಾಜ ಕಾಲುವೆಗಳನ್ನು ರಕ್ಷಣೆ ಮಾಡಬೇಕಾದ್ದು ಸರ್ಕಾರಿ ಅಧಿಕಾರಿಗಳ ಕರ್ತವ್ಯವಾಗಿದ್ದು ಅದರಲ್ಲೂ ಸಾರ್ವಜನಿಕರ ಹಿತಾಸಕ್ತಿ ಸಂಘಟನೆಗಳು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ದೂರು ನೀಡಿದರು ಸಹ ಸರ್ಕಾರಿ ಅಧಿಕಾರಿಗಳು ಅವರ ಕರ್ತವ್ಯದ ಕಡೆ ಗಮನ ಹರಿಸದೇ ಇರುವುದು ಮನಸ್ಸಿಗೆ ಬಹಳ ಬೇಸರವೆನಿಸಿದೆ,ಈ ಕಾಲುದಾರಿಒತ್ತುವರಿಯಾಗಿರುವ ಕಾರಣದಿಂದ ಅಕ್ಕಪಕ್ಕದ ಕೃಷಿ ಜಮೀನುಗಳಿಗೆ ಹೋಗಲು ರೈತಾಪಿ ಜನಗಳಿಗೆ ದಾರಿಯಿಲ್ಲದೇ ತೊಂದರೆಯಾಗುತ್ತಿದ್ದು ರೈತಾಪಿ ಜನಗಳಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಮ್ಮ ಸಂಘಟನೆ ಹೋರಾಟ ಮಾಡುತ್ತಿದ್ದು ತಾಲ್ಲೂಕು ಹಂತದಲ್ಲಿ ನಮ್ಮ ಹೋರಾಟಕ್ಕೆ ನ್ಯಾಯ ಸಿಗದೇ ಇದ್ದಲ್ಲಿ ಮಾನ್ಯ ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹುಡಲಾಗುತ್ತದೆ, ಹಾಗೂ ಅತಿ ಜರುರಾಗಿ ದಿನಾಂಕವನ್ನು ಒತ್ತುಪಡಿಸಿ ಒತ್ತುವರಿಯ ಜಾಗವನ್ನ ತೆರವು ಮಾಡದೆ ಇದ್ದಲ್ಲಿ ನೆಲಮಂಗಲ ತಹಸೀಲ್ದಾರ್ ಅರುಂಧತಿ ಅವರ ವಿರುದ್ಧ ದೂರು ನೀಡಿ ನೆಲಮಂಗಲ ತಹಸೀಲ್ದಾರ್ ಅರುಂಧತಿ ರವರನ್ನು ಕಡ್ಡಾಯ ನಿವೃತ್ತಿಗೊಳಿಸುವಂತೆ ಕರ್ನಾಟಕ ರಾಜ್ಯ ಕಂದಾಯ ಇಲಾಖೆಗೆ ಮನವಿ ಮಾಡುತ್ತಿವೆ ಹಾಗೂ ಮಾನ್ಯ ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ರಿಟ್ ಪೆಟಿಷನ್ ದಾವೇಯನ್ನು ಕೂಡ ಹಾಕುತ್ತೇವೆ ಎಂದು ಕರ್ನಾಟಕ ರಣಧೀರರ ವೇದಿಕೆಯ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು.ಕೆ.ಆರ್ ರವರು ಮಾಧ್ಯಮಗಳ ಮುಂದೆ ಹೇಳಿದರು.