ನೆಲಮಂಗಲದಲ್ಲಿ ವಿಜೃಂಭಣೆಯಿಂದ ಜರಗಿದ ಭುವನೇಶ್ವರಿಯ ಹಬ್ಬ
ಕರ್ನಾಟಕ ರಣಧೀರರ ವೇದಿಕೆ ವತಿಯಿಂದ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು ಹಾಗೂ ಕನ್ನಡಿಗರ ಆರಾಧ್ಯ ದೇವತೆಯಾದ ತಾಯಿ ಶ್ರೀ ಭುವನೇಶ್ವರಿ ದೇವಿಯ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು,
ನೆಲಮಂಗಲ ನಗರದ ಹೃದಯ ಭಾಗದಲ್ಲಿ ಇರುವ ತಾಯಿ ಶ್ರೀ ಭುವನೇಶ್ವರಿ ದೇವಾಲಯದ ಆವರಣದಲ್ಲಿ ಕರ್ನಾಟಕ ರಣಧೀರರ ವೇದಿಕೆಯ ವತಿಯಿಂದ ಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು.ಕೆ.ಆರ್.ರವರ ನೇತೃತ್ವದಲ್ಲಿ ಹಾಗೂ ಸಂಘಟನೆಯ ನೂರಾರು ಪದಾಧಿಕಾರಿಗಳ ಸಮ್ಮುಖದಲ್ಲಿ ಸಂಘಟನೆಯ 4ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ನೆರವೇರಿಸಲಾಯಿತು, ಅಂಬಾರಿಯನ್ನೇ ನಾಚಿಸುವಂತಹ ಅಂಬಾರಿ ರೂಪದ ಕೃತಕ ಅಂಬಾರಿ ರಥದಲ್ಲಿ ತಾಯಿ ಶ್ರೀ ಭುವನೇಶ್ವರಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ನೆಲಮಂಗಲ ನಗರದ ಹೆಬ್ಬಾಗಿಲಾದ ಅರಿಶಿನಕುಂಟೆ ತಿರುವಿನಿಂದ ನೆಲಮಂಗಲದ ಮುಖ್ಯರಸ್ತೆಯಲ್ಲಿ ನೆಲಮಂಗಲ ಹೃದಯ ಭಾಗದ ತಾಯಿ ಶ್ರೀ ಭುವನೇಶ್ವರಿ ದೇವಾಲಯದವರೆಗೆ ಅದ್ದೂರಿಯಾಗಿ ಅನೇಕ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು, ಈ ಮೆರವಣಿಗೆಯಲ್ಲಿ ಸುಮಾರು 300 ಜನಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ನೂರಾರು ಜನ ಸಾರ್ವಜನಿಕರು ಪಾಲ್ಗೊಂಡಿದ್ದರು, ನಮ್ಮ ಕರ್ನಾಟಕ ರಣಧೀರರ ವೇದಿಕೆಯ ಸಾವಿರಾರು ಕಾರ್ಯಕರ್ತರ ಒಗ್ಗಟ್ಟಿನಿಂದ ಇಂದು ನಮ್ಮ ಸಂಘಟನೆಯ ನಾಲ್ಕನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದೇವೆ ತಾಯಿ ಶ್ರೀ ಭುವನೇಶ್ವರಿ ದೇವಿಯ ಉತ್ಸವವನ್ನು ಕೂಡ ಬಹಳ ವಿಜೃಂಭಣೆಯಿಂದ ಆಚರಿಸಿದ್ದೇವೆ,
ಈ ನಮ್ಮ ಕನ್ನಡ ಹಬ್ಬದ ಯಶಸ್ಸಿಗೆ ನಮ್ಮ ಸಂಘಟನೆಯ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಹಾಗೂ ಈ ಕನ್ನಡ ನಾಡಿನಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿದ್ದು ಅದನ್ನ ನಿವಾರಿಸುವಲ್ಲಿ ಈಗಿನ ರಾಜಕಾರಣಿಗಳು ಈ ಹಿಂದೆ ಇದ್ದ ರಾಜಕಾರಣಿಗಳು ವಿಫಲರಾಗಿದ್ದಾರೆ ತಾಯಿ ಶ್ರೀ ಕನ್ನಡಾಂಬೆಯಾದ ಶ್ರೀ ಭುವನೇಶ್ವರಿ ದೇವಿಯು ಈ ರಾಜಕಾರಣಿಗಳಿಗೆ ಒಳ್ಳೆಯ ಬುದ್ದಿಯನ್ನು ಕೊಟ್ಟು ನಾಡಿನ ಜನತೆಗೆ ಉಪಕಾರ ವಾಗುವ ಕೆಲಸಗಳನ್ನು ಮಾಡಲಿ, ಅವರ ಮೇಲೆ ಇವರು ಇವರ ಮೇಲೆ ಅವರು ಕೆಸರಾಟ ಆಡಿಕೊಂಡು ಮಾಡುತ್ತಿರುವ ಈ ನೀಚ ಕೆಲಸಗಳನ್ನು ಕೈ ಬಿಡುವಂತೆ ತಾಯಿ ಒಳ್ಳೆ ಬುದ್ಧಿ ಕೊಡಲಿ ಎಂದು ಸಂಘಟನೆಯ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು ಕೆ.ಆರ್ ರವರು ಮಾಧ್ಯಮ ದೊಂದಿಗೆ ತಿಳಿಸಿದರು ಇದೇ ಸಂದರ್ಭದಲ್ಲಿ ಹನುಮಂತರಾಜು, ಚನ್ನೇಗೌಡ, ಕೋಟೆ ಬೀದಿ ರಾಜಣ್ಣ, ಹಾಗೂ ಸಂಘಟನೆಯ ಕಾರ್ಯಕರ್ತರುಗಳಾದ ಬಿ.ಎನ್.ವಿಜಯ್ ಕುಮಾರ್, ರಾಮಾಂಜನೇಯ, ಕಾಂತ ಕುಮಾರ್, ದೇವರಾಜು, ಭೈರವ, ರಾಕೇಶ್ ಕುಮಾರ್, ದಳಪತಿ ಕುಮಾರ್, ಎಂ ಜಿ ಗೌಡ, ಶಂಕರೇಗೌಡ, ಮಂಜುನಾಥ್, ಪ್ರಮೀಳಾ, ನೇತ್ರಾವತಿ, ಜಯಶ್ರೀ, ಪೂಜಾ, ಗೌರಮ್ಮ, ದಿನೇಶ್, ರಕ್ಷಿತ್, ಸಂಜಯ್ ಗೌಡ, ಮಂಜು ಭಗತ್, ದೊಡ್ಡಯ್ಯ, ಮುತ್ತುರಾಜ್ ಸೇರಿದಂತೆ 300ಕ್ಕೂ ಹೆಚ್ಚು ಪದಾಧಿಕಾರಿಗಳು ಹಾಜರಿದ್ದರು.