ಆಸ್ಪತ್ರೆಯ ಶವಾಗಾರದ ಕೊಠಡಿಯಲ್ಲೇ ರಾಸಾಲೀಲೆ : ಮೃತ ಮಹಿಳೆಯರ ನಗ್ನ ಫೋಟೋ ಸೆರೆ ಹಿಡಿದು ವಿಕೃತಿ ಮೆರೆದ ಕಾಮುಕ
ಮಡಿಕೇರಿ: ಪೋಸ್ಟ್ ಮಾರ್ಟಂ ಮಾಡುವ ಕೊಠಡಿಗೆ ಆಸ್ಪತ್ರೆಯ ಯುವತಿ ಹಾಗೂ ಮಹಿಳೆಯರನ್ನು ಕರೆಸಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದುದಲ್ಲದೇ, ಶವಾಗಾರದಲ್ಲಿರುವ ಮೃತ ಮಹಿಳೆಯರ ನಗ್ನ ಫೋಟೋಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದು ವ್ಯಕ್ತಿಯೊಬ್ಬ ವಿಕೃತಿ ಮೆರೆದ ಘಟನೆ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದ ಸೈಯದ್ ಎಂಬಾತನೇ ಈ ಕೃತ್ಯ ಎಸಗಿದಾತ. ಈತ 2021ರ ಏಪ್ರಿಲ್‌ನಲ್ಲಿ ಗುತ್ತಿಗೆ ಆಧಾರಿತವಾಗಿ ಕೊಡಗು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಅಟೆಂಡರ್ ಕೆಲಸಕ್ಕೆ ಸೇರ್ಪಡೆಯಾಗಿದ್ದ. ಕೋವಿಡ್ ಸಂದರ್ಭದಲ್ಲಿ ಈತನ ಕೆಲಸ ನೋಡಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆತನಿಗೆ ಸನ್ಮಾನ ಮಾಡಿದ್ದರು. ಆದರೆ, ಇದೀಗ ಈತನ ಇನ್ನೊಂದು ಮುಖ ಬಯಲಾಗಿದೆ.
ಆಸ್ಪತ್ರೆಯಲ್ಲಿ ಕೆಲಸ ಮಾಡುವ ಕೆಲವು ಮಹಿಳೆಯರನ್ನು ಫೋನ್ ಮಾಡಿ ಈತ ಶವಾಗಾರಕ್ಕೆ ಬರುವಂತೆ ಹೇಳುತ್ತಿದ್ದ. ಅವರು ಬಂದ ಬಳಿಕ ಶವಾಗಾರದಲ್ಲೇ ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಅಲ್ಲದೆ ವಿವಿಧ ಕಾರಣಗಳಿಂದ ಜೀವ ಕಳೆದುಕೊಂಡ ಮಹಿಳೆಯರನ್ನು ಶವಾಗಾರದಲ್ಲಿರಿಸುವ ವೇಳೆ ಮೃತ ಮಹಿಳೆಯರ ನಗ್ನ ಫೋಟೋಗಳನ್ನು ಈತ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದು ಇಟ್ಟುಕೊಳ್ಳುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.
ತಿಂಗಳ ಹಿಂದೆ ಈತ ಮನೆಯೊಂದಕ್ಕೆ ನುಗ್ಗಲು ಯತ್ನಿಸಿ ಜನರಿಗೆ ಸಿಕ್ಕಿ ಬಿದ್ದಾಗ ಜನರು ಆತನ ಮೊಬೈಲ್ ಫೋನ್ ವಶಪಡಿಸಿ ಪೊಲೀಸರಿಗೆ ಹಸ್ತಾಂತರಿಸಿದ್ದು, ಈ ವೇಳೆ ಈತನ ಅಸಲಿ ಮುಖ ಜನರಿಗೆ ಗೊತ್ತಾಗಿದೆ. ಆತನ ಫೋನ್ ಕರೆ ಪರಿಶೀಲಿಸಿದಾಗ ಆತ ಯಾರೊಂದಿಗೆಲ್ಲಾ ಮಾತನಾಡಿದ್ದಾನೆಂಬುದು ಗೊತ್ತಾಗಿದೆ. ಅಲ್ಲದೆ ಮೃತ ಮಹಿಳೆಯರ ನಗ್ನ ದೇಹದ ಫೋಟೋಗಳನ್ನು ಮೊಬೈಲ್‌ನಲ್ಲಿಟ್ಟುಕೊಂಡಿರುವುದೂ ತಿಳಿದು ಬಂದಿದೆ. ಇನ್ನು ಈತನ ಕೃತ್ಯದ ಕುರಿತು ಹಿಂದೂ ಜಾಗರಣ ವೇದಿಕೆಯು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಹಾಗೂ ಡೀನ್ ಕಾರಿಯಪ್ಪ ಅವರಿಗೆ ದೂರು ನೀಡಿದ್ದು, ಅವರು ಮಡಿಕೇರಿ ನಗರ ಪೊಲೀಸ್ ಠಾಣೆಗೆ ಸಯ್ಯದ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.