ಸಾಹಿತಿ, ಉಪನ್ಯಾಸಕಿ ಡಾ .ಅನ್ನಪೂರ್ಣ ಹಿರೇಮಠ್ ಅವರಿಗೆ 2024 25ನೇ ಸಾಲಿನ ಬಸವ ಪುರಸ್ಕಾರ
ಬೆಳಗಾವಿ-ಕಲಬುರ್ಗಿ ತಾಲೂಕಿನ ಪಾಳಗ್ರಾಮದ ಶ್ರೀ ಸುಭಾಷ್ ಚಂದ್ರ ಪಾಟೀಲ್ ಜನಕಲ್ಯಾಣ ಟ್ರಸ್ಟ್ ರಿಜಿಸ್ಟರ್ ವತಿಯಿಂದ ಸಾಹಿತ್ಯ ಕೃಷಿ ಸಾಧಕರಿಗೆ ಆರನೇ ವರ್ಷದ ರಾಜ್ಯಮಟ್ಟದ ಬಸವ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಈ ವರ್ಷ 2024 25 ನೇ ಸಾಲಿನ ಪುಸ್ತಕ ಪುರಸ್ಕಾರ ಗಜಲ್ ಸಂಕಲನ ಮೌನ ವೀಣೆ ನುಡಿದಾಗ ಕೃತಿಯನ್ನು ಆಯ್ಕೆ ಮಾಡಲಾಗಿದೆ ಎಂದು ತಮಗೆ ತಿಳಿಸಲು ನಮಗೆ ತುಂಬಾ ಸಂತೋಷವಾಗುತ್ತಿದೆ. ದಿನಾಂಕ 16 ಜೂನ್ 2024ರ ಮಧ್ಯಾಹ್ನ ೧ .೩೦ ಕ್ಕೆ ಕಲಬುರಗಿ ನಗರದ ಲಿಂಗೈಕ್ಯ ಬಸವರಾಜಪ್ಪ ಅಪ್ಪ ಸಭಾಭವನದಲ್ಲಿ ಶರಣ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಬಸವ ಪುರಸ್ಕಾರ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ತಾವುಗಳು ಸಮಯಕ್ಕೆ ಸರಿಯಾಗಿ ಬಂದು ತಮ್ಮ ಶ್ರೇಷ್ಠ ಪ್ರಶಸ್ತಿಯನ್ನು ಸ್ವೀಕರಿಸಲು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಅಧ್ಯಕ್ಷರು ಶ್ರೀ ಶರಣಗೌಡ ಪಾಟೀಲ ಪಾಳಾ ತಿಳಿಸಿದ್ದಾರೆ.