ಭಾವಸಂಗಮದ ದಶಮಾನೋತ್ಸವ ಕಾರ್ಯಕ್ರಮದ 2024- 25 ನೇ ಸಾಲಿನ “ಸ್ವರ್ಣ ಸಿರಿ’ ಪ್ರಶಸ್ತಿ ಶ್ರೀಮತಿ ಡಾ. ವಿದ್ಯಾ ಕೆ ಗೆ ಪ್ರಧಾನ
ಹುಬ್ಬಳ್ಳಿ-ಭಾವಸಂಗಮದ ದಶಮಾನೋತ್ಸವ ಕಾರ್ಯಕ್ರಮ 2024 25 ನೇ ಸಾಲಿನ “ಸ್ವರ್ಣ ಸಿರಿ’ ಪ್ರಶಸ್ತಿಗೆ ಶ್ರೀಮತಿ ಡಾ. ವಿದ್ಯಾ ಕೆ ಆಯ್ಕೆಯಾಗಿದ್ದು, 23/6/24 ರಂದು ಹುಬ್ಬಳ್ಳಿ ಯ ಮಹಾರಾಷ್ಟ್ರ ಮಂಡಲ ಸಭಾಂಗಣದಲ್ಲಿ ಎಲ್ಲಾ ಗಣ್ಯರ ಸಮ್ಮುಖದಲ್ಲಿ ಇವರಿಗೆ ಸ್ವರ್ಣ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇವರು ಕುಬೇಂದ್ರ ಮತ್ತು ಜಯಂತಿ ದಂಪತಿಗಳ ಮೂರನೇ ಮಗಳಾದ ಇವರು ಮೂಲತಃ ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಬೆಥನಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಗೀತ ,ನೃತ್ಯ , ಸಾಹಿತಿ, ನಿರೂಪಕಿಯಾಗಿಯೂ ಹೆಸರುವಾಸಿಯಾಗಿರುವ ಇವರು ನಿಜಕ್ಕೂ ಬಹುಮುಖ ಪ್ರತಿಭೆ. ಇವರನ್ನು ಪಡೆದಂತಹ ತಂದೆ ತಾಯಿ ಹಾಗೂ ಇವರ ಕುಟುಂಬ ನಿಜಕ್ಕೂ ಧನ್ಯವಂತರು. ಇಂತಹ ಬಹುಮುಖ ಪ್ರತಿಭೆಗೆ ಇನ್ನೂ ಹೆಚ್ಚು ಹೆಚ್ಚು ಪ್ರಶಸ್ತಿ ಸಿಗಲೆಂದು ಹಾರೈಸೋಣ.