ಸಿದ್ದರಾಮಯ್ಯ ನವರೇ , ನೀವು ಕರ್ನಾಟಕಕ್ಕೆ ಮುಖ್ಯ ಮಂತ್ರಿಯೋ? ಅಥವಾ ಕೇರಳಕ್ಕೆ ಮುಖ್ಯ ಮಂತ್ರಿಯೋ? : ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ
ಶಿರಸಿ:ಕೇರಳ ವಯನಾಡ್ ದುರಂತಕ್ಕೆ ಸಂತಾಪವಿದೆ. ಇಂಥ ಘಟನೆಗಳು ಎಲ್ಲೂ ಆಗಬಾರದು. ಆದರೆ, ಕರ್ನಾಟಕ ಮುಖ್ಯ ಮಂತ್ರಿ ಸಿದ್ಧರಾಮಯ್ಯ ನವರರು ಅಲ್ಲಿನ ದುರಂತಕ್ಕೆ 100 ಮನೆಗಳನ್ನು ಕಟ್ಟಿಸಿ ಕೊಡಲು ಹೊರಟಿದ್ದಾರೆ. ಆದರೆ, ನಮ್ಮ ಕರುನಾಡಿನ ದುರಂತವೇ ಹೊದ್ದು ಮಲಗುವಷ್ಟಿದ್ದಾಗ, ಇಲ್ಲಿಯೇ ಮನೆ ಇಲ್ಲದ ಲಕ್ಷಾಂತರ ಕುಟುಂಬ ಇದ್ದಾಗ ನಮ್ಮ ಸಿಎಂ ಪಕ್ಕದ ಮನೆ ಚಿಂತೆ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಅವರು ಎಐಸಿಸಿಯ ರಾಹುಲ್ ಗಾಂಧಿ ಮೆಚ್ಚಿಸಲು ನಡೆದುಕೊಂಡ ರೀತಿ ಇದು. ಈಮೂಲಕ ಕಾಂಗ್ರೆಸ್ ಸರಕಾರದ ಮಲತಾಯಿ ಧೋರಣೆ ಈಗ ಅನಾವರಣ ಆಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಕೋಲಾ, ಕುಮಟಾ, ಹೊನ್ನಾವರ,
ಸಿದ್ದಾಪುರ ಭಾಗದಲ್ಲಿ ಹೆಚ್ಚಾಗಿ ಜಿಲ್ಲೆಯಲ್ಲಿ ಸುಮಾರು 200 ಮನೆಗಳು ಸಂಪೂರ್ಣ ನಾಶವಾಗಿವೆ , ಸುಮಾರು 500 ಮನೆಗಳು ಅರ್ಧ ನಾಶವಾಗಿವೆ.
ಅಂಕೋಲಾ ಉಳುವರೆ ಒಂದೇ ಭಾಗದಲ್ಲಿ ಕಾಳಜಿ ಕೇಂದ್ರದಲ್ಲಿ 118 ಜನ ಇದ್ದರು , ಅದೇನೋ ಭಿಕ್ಷೆ ರೀತಿಯಲ್ಲಿ NDRF 1,20,000/- ಕೊಡುತ್ತಿದ್ದೀರಾ ?
ತಾವು ಆರ್ಥಿಕ ತಜ್ಞ ರಲ್ಲವೇ ? 1.20 ಲಕ್ಷ ಕ್ಕೆ ಮನೆ ಕಟ್ಟಲು ಸಾಧ್ಯವೇ ?
ಶೌಚಾಲಯ ಕಟ್ಟಬಹುದು , ಕಲ್ಲು ಮತ್ತು ಮರಳಿಗೆ 1.20ಲಕ್ಷ ಆಗುತ್ತದೆ
ಹಿಂದೆ ಶ್ರೀ B S ಯಡಿಯೂರಪ್ಪ ಮುಖ್ಯ ಮಂತ್ರಿ ಆಗಿದ್ದಾಗ 5 ಲಕ್ಷ ಹಣ ಕೊಡುತ್ತಿದ್ದರು ನೆನಪು ಮಾಡಿಕೊಳ್ಳಿ,
ಕಾಳಜಿ ಕೇಂದ್ರ ದಿಂದ ಹೋದವರು ಎಲ್ಲಿಗೆ ಹೋಗಿದ್ದಾರೆ ನಿಮಗೆ ಗೊತ್ತೇ?
ನೆಂಟರ ಮನೆಯಲ್ಲಿ 2 ದಿನ ಇರಬಹುದು ಅಷ್ಟೇ , ಆಮೇಲೆ ಯಾರೂ ಇರಿಸಿ ಕೊಳ್ಳುವುದಿಲ್ಲ ಅಲ್ಲವೇ?
ಮಳೆಗಾಲದಲ್ಲಿ ಮನೆ ಕಟ್ಟಲೂ ಸಾಧ್ಯವಿಲ್ಲ, ಅವರು ಹಾಕಿರುವ ಬಟ್ಟೆ ಬಿಟ್ಟು ಅವರಲ್ಲಿ ಏನೂ ಇಲ್ಲಾ, ಮನೆ ಕಟ್ಟಲು ಹೇಗೆ ಸಾಧ್ಯ?
ಹೇಗೆ ಅವರು ಬದುಕುವುದು?
ಕೇರಳದಲ್ಲಿ ರಾಹುಲ್ ಗಾಂಧಿ ಮೆಚ್ಚಿಸಲು ಪುಣ್ಯಾತ್ಮರಾದ ನೀವು ನಮ್ಮ ಜನರ ಪಾಲಿಗೆ ನೀವು ಒಂದು ಶಾಪ ಆಗಿದ್ದೀರಾ..
ನಮ್ಮನ್ನ ಉಪವಾಸ ಹಾಕಿ ಪಕ್ಕದ ಮನೆಯವರಿಗೆ ಪಾಯಸ ಹಾಕುತ್ತಿದ್ದೀರಾ ಇದು ನ್ಯಾಯವೇ?
ಕೇವಲ ಉತ್ತರ ಕನ್ನಡ ಮಾತ್ರ ಅಲ್ಲ , ಕೊಡಗು, ಹಾಸನ್, ಬೆಳಗಾವಿ ಅಲ್ಲೆಲ್ಲಾ ಹಲವಾರು ಜನ ಮನೆ ಕಳೆದು ಕೊಂಡಿದ್ದಾರೆ, ದುರದೃಷ್ಟವಶಾತ್ ನಿಮಗೆ ಅದು ಕಾಣುವುದೇ ಇಲ್ಲ ,
ರಾಹುಲ್ ಗಾಂಧಿ ಕ್ಷೇತ್ರ ಮಾತ್ರ ಕಾಣುತ್ತದೆ
ಇದು ನ್ಯಾಯವೇ ?
ಶೀ ದೇಶಪಾಂಡೆ ಯವರೇ, ಮಂಕಾಳ ವೈದ್ಯರೇ?
ತಮಗೆ ದ್ವನಿ ಇಲ್ಲವೇ?
ಜಿಲ್ಲೆಯ ಪರವಾಗಿ ತಾವು ಮಾತನಾಡಬೇಕಲ್ಲವೇ ?
ಜನರ ಶಾಪ ನಿಮಗೇ ತಟ್ಟುವುದಿಲ್ಲವೇ ?
ತಮಗೆ ಮಾನವೀಯತೆ ಇದೆಯೋ ಇಲ್ಲ?
ಯಾಕೆ ಇದನ್ನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹತ್ತಿರ ಕೇಳುವುದಿಲ್ಲ?
ಆದರೆ ನಮ್ಮನ್ನ ಯಾಕೆ ಕಡೆಗಣಿಸುತ್ತಿದ್ದೀರಾ ?
ನಮ್ಮ ಆಗ್ರಹ ಇಸ್ಟೇ..
ಸಂಪೂರ್ಣ ಮನೆ ಕಳೆದು ಕೊಂಡವರಿಗೆ 5 ಲಕ್ಷ ಹಣ ಕೊಡಬೇಕು, ಮನೆ ಹಾಳು ಆದರೆ 2.50 lakhs ಕೊಡಬೇಕು
ಕೇಂದ್ರ ಸರ್ಕಾರ ಕೂಡ ವಿಶೇಷ ಪರಿಹಾರ ಕೊಡಬೇಕು , ಅದನ್ನ ಈಗಾಗಲೇ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಯವರು ಕೇಂದ್ರಕ್ಕೆ ಮಾತನ್ನಾಡಿದ್ದಾರೆ
ಇನ್ನೂ ಒಂದು ದುರಂತ ಅಂದರೆ ಕೇರಳ ವಯನಾಡ್ ದುರಂತ ಆದಮೇಲೆ ಮೀಡಿಯ ದವರು ಅಂಕೋಲಾ ಶಿರೂರ ಘಟನೆ ಮರೆತೇ ಹೋಗಿದ್ದಾರೆ, ಸರಕಾರ ಕೂಡಾ ಮರೆತರೆ ಹೇಗೆ?
ಅಡಿಕೆ ಸೇರಿದಂತೆ ಉಳಿದ ಬೆಳೆಗಳು ನಷ್ಟವಾಗಿದೆ. ರೈತರ ನೆರವಿಗೆ ಬರುವವರು ಯಾರೂ ಇಲ್ಲ. ರಸ್ತೆ ಸಂಚಾರ ಪ್ರತಿ ಕ್ಷಣ ಅಪಾಯವಾಗಿಸುತ್ತಿದೆ.
15 ದಿನ ನಾನು ರಾಜ್ಯ ಸರ್ಕಾರಕ್ಕೇ ಗಡುವು ಕೊಡುತ್ತಿದ್ದೇನೆ, ಒಂದು ವೇಳೆ ನೀವು ಕರ್ನಾಟಕದ ಮನೆ ಕಳೆದು ಕೊಂಡವರಿಗೆ ಯಾವುದೇ ವಿಶೇಷ ಪರಿಹಾರ ನೀಡಲ್ಲ ಅಂದರೆ ಪ್ರತಿಭಟನೆಯ ದಾರಿ ತುಳಿಯುತ್ತೇವೆ ಎಂದೂ ಹೇಳಿದರು.