ಬಾಗಲಕೋಟೆ-ಬಾಗಲಕೋಟೆ ನಗರದ ಹೆಲಿಪ್ಯಾಡ್ ರಸ್ತೆಯಲ್ಲಿ ಗಣೇಶ ಉತ್ಸವದ ರಜೆಗೆಂದು ಊರಿಗೆ ಬಂದಿದ್ದ ಬೆಂಗಳೂರಿನ ಸಾಪ್ಟ್ ವೇರ್ ಇಂಜಿನಿಯರ್ ಸೇರಿ ಮೂವರು ಅಪಘಾತದಲ್ಲಿ ಸಾವಿಗೀಡಾದ ಘಟನೆ ನಡೆದಿದೆ.
ಬೆಂಗಳೂರಿನ ಸಾಪ್ಟವೇರ್ ಎಂಜಿನಿಯರ್ ರಜನಿ ಒಂದಕುದರಿ (34), ಬಾಗಲಕೋಟೆಯ ಬಿವಿವಿ ಸಂಘದ ದಂತ ವೈದ್ಯಕೀಯ ಕಾಲೇಜಿನ ಉಪನ್ಯಾಸಕಿ ಶೃತಿ ಒಂದಕುದರಿ (32) ಹಾಗೂ ಅಭಿಷೇಕ ದೋತ್ರೆ (20) ಎಂಬುವವರು ಅಪಘಾತದಲ್ಲಿ ಮೃತರಾಗಿದ್ದಾರೆ ಎಂದು ತಿಳಿದು ಬಂದಿದೆ.
ರಜನಿ ಬೆಂಗಳೂರಿನಲ್ಲಿ ಸಾಪ್ಟವೇರ್ ಎಂಜಿನಿಯರ್ ಆಗಿದ್ದು, ರಜೆಯ ನಿಮಿತ್ಯ ಬಾಗಲಕೋಟೆಗೆ ಬಂದಿದ್ದರು. ತನ್ನ ದೂರದ ಸಂಬಂಧಿ ಶೃತಿ ಜತೆಗೆ ಹೊರಗಡೆ ಊಟ ಮಾಡಿ, ಮರಳಿ ಅವರ ಮನೆಗೆ ಹೊರಟಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ.ಬಾಗಲಕೋಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.