ನೆಲಮಂಗಲ-ನೆಲಮಂಗಲ ತಾಲೂಕು ಕಚೇರಿ ಮುಂಭಾಗದಲ್ಲಿ ನನ್ನ ನೆಲದ ಉದ್ಯೋಗ ನನ್ನ ಹಕ್ಕು ಹೋರಾಟ ಸಮಿತಿ ಎಂಬ ಹೆಸರಿನ ಅಡಿಯಲ್ಲಿ ಹತ್ತಾರು ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಇಂದು ನನ್ನ ನೆಲದ ಉದ್ಯೋಗ ನನ್ನ ಹಕ್ಕು ಎಂಬ ಘೋಷ ವಾಕ್ಯದೊಂದಿಗೆ ಬೃಹತ್ ಮಟ್ಟದ ಹೋರಾಟ ನಡೆಯಲಾಯಿತು.
ಕನ್ನಡ ನಾಡಿನಲ್ಲಿ ಖಾಸಗಿ ಕ್ಷೇತ್ರದಲ್ಲಿ ನೂರಕ್ಕೆ ನೂರಷ್ಟು ಕನ್ನಡಿಗರೇ ಉದ್ಯೋಗದಲ್ಲಿ ಇರಬೇಕು ಮೀಸಲಿಡುವಂತೆ ಕರ್ನಾಟಕ ಸರ್ಕಾರ ಗಟ್ಟಿ ನಿರ್ಧಾರ ಮಾಡಬೇಕು ಎಂದು ಬಾಬು ಹುಸೇನ್ ಹೇಳಿದರು
ಕನ್ನಡ ನಾಡಿನ ಮಕ್ಕಳು ಎಲ್ಲರೂ ಜಾತಿ ಧರ್ಮಗಳ ಗುಂಗಿನಿಂದ ಹೊರಬೇಕು ಇಲ್ಲಿ ಎಲ್ಲರೂ ಒಂದೇ ಜಾತಿ ಒಂದೇ ಧರ್ಮ ನಾವು ಕನ್ನಡಿಗರು ಎಲ್ಲಾ ಧರ್ಮ ಮತ್ತು ಜಾತಿಯ ಯುವಕರು ಹೋರಾಟಗಾರರು ಒಂದಾಗಬೇಕು ಕನ್ನಡಿಗರಿಗೆ ಉದ್ಯೋಗ ಮೀಸಲಾಗಬೇಕು ಎಂಬ ಈ ಚಿಪ್ಪು ಚಳುವಳಿಯನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸಬೇಕು ಎಂದು ಕನಕೇನಹಳ್ಳಿ ಕೃಷ್ಣಪ್ಪ ಹೇಳಿದರು.
ಕರ್ನಾಟಕದಲ್ಲಿ ಬ್ಯಾಂಕು ಅಂಚೆ ಕಚೇರಿ ಐಟಿ ಬಿಟಿಗಳ ನೊಳಗೊಂಡಂತೆ ಖಾಸಗಿ ಕ್ಷೇತ್ರದ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡಿಗರೇ ಮೇಲುಗೈ ಸಾಧಿಸಬೇಕು ಎಂದು ಅಶ್ವಥ್ ಮರಿಗೌಡ ಹೇಳಿದ್ದರು.
ಇಂದು ನೆಲಮಂಗಲದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆಯನ್ನು ಆರಂಭಿಸಿದ್ದೇವೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿ ತಾಲೂಕು ಕೇಂದ್ರಗಳಲ್ಲಿ ಹಾಗೂ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟವನ್ನು ಮಾಡುತ್ತೇವೆ ಇನ್ನು ಹತ್ತು ಹಲವಾರು ವಿಭಿನ್ನ ಹೋರಾಟಗಳನ್ನು ಕೈಗೊಳ್ಳುತ್ತೇವೆ ಎಂದು ಶಂಕರ್ ಗೌಡ್ರು ಕೆ.ಆರ್ ರವರು ಹೇಳಿದರು
ನನ್ನ ನೆಲದ ಉದ್ಯೋಗ ನನ್ನ ಹಕ್ಕು ಎಂಬ ಹೋರಾಟ ಮಾಡುವುದರ ಜೊತೆಗೆ ನಾವುಗಳು ಇಂದು ವಲಸಿಗರನ್ನು ಕರ್ನಾಟಕ ಬಿಟ್ಟು ಹೋಗುವಂತೆ ಆಗ್ರಹಿಸಿ ಎಲ್ಲಾ ಬ್ಯಾಂಕುಗಳಿಗೆ ಆಗ್ರಹ ಪತ್ರವನ್ನು ನೀಡುತ್ತಿದ್ದೇವೆ, ಶೀಘ್ರದಲ್ಲಿ ವಲಸೆ ಅಧಿಕಾರಿಗಳು ವರ್ಗಾವಣೆ ಮಾಡಿಕೊಂಡು ನಮ್ಮ ರಾಜ್ಯದಿಂದ ಆಚೆಗೆ ಹೋಗದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಮಟ್ಟದ ಹೋರಾಟ ಮಾಡುತ್ತೇವೆ ಎಂದು ಚೇತನ್ ಗೌಡ ಎಂ ಹೇಳಿದರು.
ಇದೇ ಸಂದರ್ಭದಲ್ಲಿ ಮಂಜು ಗಣಪತಿಪುರ, ಚೇತನ್ ಗೌಡ.ಎಂ, ಮೈಕೋ ಮಂಜುನಾಥ್, ಮಲ್ಲೇಶ್, ಮೂರ್ತಿ, ರಮೇಶ್, ಬಾಬು ಹುಸೇನ್, ಪ್ರಸನ್ನ ಗೌಡ, ಚೇತನ್ ವಸಿಷ್ಠ, ವಿಜಯ್ ಕುಮಾರ್, ಕನ್ನಡಾಂಬೆ ಮಂಜು, ಅರುಣ್ ಕುಮಾರ್, ಅರುಣ್ ಚಿಕ್ಕಮಾರನಹಳ್ಳಿ, ಅನಂತ್ ಚಿಕ್ಕಮಾರನಹಳ್ಳಿ, ವಿದ್ಯಾರ್ಥಿ ಕಿರಣ್, ನವೀನ್, ಮತ್ತಿತರರು ಹಾಜರಿದ್ದರು