-ಮಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಶಾರೀಖ್ ಸೇರಿದಂತೆ ಒಟ್ಟು ನಾಲ್ವರ ಬಂಧನ
ಮಂಗಳೂರು -ಮಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಶಾರೀಖ್ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾರೀಖ್ ನನ್ನು ಪೊಲೀಸರು ಇಂದು ವಿಚಾರಣೆಗೆ ಒಳಪಡಿಸಲಿದ್ದಾರೆ. ಇನ್ನೊಂದೆಡೆಯಲ್ಲಿ ಶಾರೀಖ್ ಪೋಷಕರ ವಿಚಾರಣೆ ಕೂಡ ನಡೆಯಲಿದೆ.
ಮಂಗಳೂರು ನಗರದ ನಾಗುರಿಯಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಪೋಟ (Mangalore Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಉಗ್ರರ ಜಾಡು ಹಿಡಿದಿದ್ದಾರೆ. ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಎಲ್ಲಿಯ ಲಿಂಕ್ ಇದೆ ಅನ್ನೋ ಕುರಿತು ಮಾಹಿತಿಯನ್ನು ಕಲೆ ಹಾಕಲು ಮುಂದಾಗಿದ್ದಾರೆ. ಮಂಗಳೂರಲ್ಲಿ ಪ್ರಮುಖ ಆರೋಪಿ ಶಾರೀಖ್ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ರೆ, ಪ್ರಕರಣಕ್ಕೆ ಸಹಕಾರ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಇಬ್ಬರು ಮತ್ತು ಊಟಿಯಲ್ಲಿ ಓರ್ವನನ್ನು ಬಂಧಿಸಿದ್ದಾರೆ.
ಮಂಗಳೂರು ಬ್ಲಾಸ್ಟ್ : ಆರೋಪಿ ಶಾರೀಖ್ ಸೇರಿ ನಾಲ್ವರು ಅರೆಸ್ಟ್
ಮಂಗಳೂರಲ್ಲಿ ಪ್ರಮುಖ ಆರೋಪಿ ಶಾರೀಖ್ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ರೆ, ಪ್ರಕರಣಕ್ಕೆ ಸಹಕಾರ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಇಬ್ಬರು ಮತ್ತು ಊಟಿಯಲ್ಲಿ ಓರ್ವನನ್ನು ಬಂಧಿಸಿದ್ದಾರೆ.
ಮಂಗಳೂರು : ಮಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಶಾರೀಖ್ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾರೀಖ್ ನನ್ನು ಪೊಲೀಸರು ಇಂದು ವಿಚಾರಣೆಗೆ ಒಳಪಡಿಸಲಿದ್ದಾರೆ. ಇನ್ನೊಂದೆಡೆಯಲ್ಲಿ ಶಾರೀಖ್ ಪೋಷಕರ ವಿಚಾರಣೆ ಕೂಡ ನಡೆಯಲಿದೆ.
ಮಂಗಳೂರು ನಗರದ ನಾಗುರಿಯಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಪೋಟ (Mangalore Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಉಗ್ರರ ಜಾಡು ಹಿಡಿದಿದ್ದಾರೆ. ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಎಲ್ಲಿಯ ಲಿಂಕ್ ಇದೆ ಅನ್ನೋ ಕುರಿತು ಮಾಹಿತಿಯನ್ನು ಕಲೆ ಹಾಕಲು ಮುಂದಾಗಿದ್ದಾರೆ. ಮಂಗಳೂರಲ್ಲಿ ಪ್ರಮುಖ ಆರೋಪಿ ಶಾರೀಖ್ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ರೆ, ಪ್ರಕರಣಕ್ಕೆ ಸಹಕಾರ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಇಬ್ಬರು ಮತ್ತು ಊಟಿಯಲ್ಲಿ ಓರ್ವನನ್ನು ಬಂಧಿಸಿದ್ದಾರೆ.
ಬಾಂಬ್ ಬ್ಲಾಸ್ಟ್ ಅದ ಆಟೋದಲ್ಲಿ ಶಾರೀಖ್ ಬಳಸುತ್ತಿದ್ದ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೊಬೈಲ್ ನಲ್ಲಿರುವ ಮಾಹಿತಿಯನ್ನು ಆಧರಿಸಿ ಶಾರೀಖ್ ಯಾರೊಂದಿಗೆ ಸಂಪರ್ಕವನ್ನು ಹೊಂದಿದ್ದ, ಈ ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಪ್ರಕರಣದಲ್ಲಿ ಶಾರಿಕ್ ಗೆ ಸಹಾಯ ಮಾಡಿದ ಯಾಸಿನ್, ಮಾಜ್ ಮತ್ತು ಅಹ್ಮದ್ ಮೂವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಶಾರೀಖ್ ಯಾರು..?
ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ ಬರೆದಿದ್ದ ಶಾರೀಖ್, ಶಿವಮೊಗ್ಗ ಗಲಭೆಯಲ್ಲೂ ಈತನ ಹೆಸರು ಕೇಳಿ ಬಂದಿತ್ತು. ಆದ್ದರಿಂದ ಎನ್‍ಐಎ (NIA) ಈತನಿಗಾಗಿ ಹುಡುಕಾಟ ನಡೆಸಿತ್ತು. ಹೀಗಾಗಿ ಎನ್‍ಐಎ ಗೆ ಸಿಕ್ಕಿ ಬೀಳುವುದಕ್ಕಿಂತಲೂ ಈತ ಸೂಸೈಡ್ ಬಾಂಬರ್’ ಆಗಲು ನಿರ್ಧಾರ ಮಾಡಿದ್ದನು. ಇದೇ ಕಾರಣಕ್ಕೆ ಮಂಗಳೂರು ಬ್ಲಾಸ್ಟ್ ಗೆ ಪ್ಲಾನ್ ಮಾಡಿದ್ದ ಶಾರೀಖ್, ಇದಕ್ಕೂ ಮುನ್ನ ಹಲವೆಡೆ ಪ್ರಯೋಗಿಕ ಬಾಂಬ್ ಬ್ಲಾಸ್ಟ್ ಮಾಡಿದ್ದ ಎಂಬ ಮಾಹಿತಿ ಲಭಿಸಿದೆ.
ಎಂಜಿನಿಯರಿಂಗ್ ವಿದ್ಯಾಭ್ಯಾಸದ ಹೊತ್ತಲ್ಲೇ ಉಗ್ರ ಪರ ಗೋಡೆ ಬರಹ ಬರೆದ ಶಾರೀಖ್
ಈ ಹಿಂದೆ ಮಂಗಳೂರಿನ ಎರಡು ಕಡೆಗಳಲ್ಲಿ ಐಸಿಸಿ ಉಗ್ರರ ಪರ ಗೋಡೆ ಬರಹ ಬರೆದಿದ್ದ ಶಾರಿಕ್, ಈ ಬಾಂಬ್ ಬ್ಲಾಸ್ಟ್ ಗೆ ಪ್ಲಾನ್ ಮಾಡಿದ್ದ. ಶಾರಿಕ್ ಹಾಗೂ ಆತನ ಸ್ನೇಹಿತ ಮಾಝ್ ಮನೀರ್ ಅಹಮ್ಮದ್ ಮಂಗಳೂರಿನ ದೇರಳಕಟ್ಟೆ ಯ ಪಿ ಎ ಕಾಲೇಜಿನಲ್ಲಿ ಎಂಜಿನಿಯರಿಂಗ್ ಕಲಿಯುತ್ತಿದ್ದಾಗಲೇ ಈ ಗೋಡೆ ಬರಹ ಬರೆದಿದ್ದರು. ಪೊಲೀಸರು ಅಂದು ಇಬ್ಬರೂ ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಇಬ್ಬರೂ ಕೂಡ ಜಾಮೀನಿನ ಮೇಲೆ ಹೊರಗೆ ಬಂದಿದ್ದರು.
ಉಗ್ರರನ್ನು ಬೆಂಬಲಿಸಲು ಪ್ಲ್ಯಾನ್:
ಮಂಗಳೂರಿನ ಕೋರ್ಟ್ ಆವರಣ ಹಾಗೂ ಬಿಜೈ ಎಂಬಲ್ಲಿ ಉಗ್ರರ ಪರ ಗೋಡೆ ಬರಹ ಬರೆದ ಬಳಿಕ ಜಾಮೀನು ಪಡೆದಿದ್ದ ಈ ಇಬ್ಬರೂ ಬಾಂಬ್ ತಯಾರಿಸಿ ಹಲವೆಡೆ ಬಾಂಬ್ ಸ್ಪೋಟದ ರಿಹರ್ಸಲ್ ಮಾಡುತ್ತಿದ್ದರು. ಇತ್ತೀಚೆಗೆ ಶಿವಮೊಗ್ಗದ ಕೋಮು ಗಲಭೆಯಲ್ಲಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿದ ಪ್ರಕರಣದಲ್ಲಿ ಈ ಇಬ್ಬರೂ ಭಾಗಿಯಾಗಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುನೀರ್ ಅಹಮ್ಮದ್ ನನ್ನು ಎನ್‍ಐಎ (NIA) ಅಧಿಕಾರಿಗಳು ಬಂಧಿಸಿದ್ದರು. ಆದರೆ ಶಾರೀಕ್ ಮಾತ್ರ ಪೊಲೀಸರ ಕಣ್ತಪ್ಪಿಸಿಕೊಂಡಿದ್ದ. ಇದೀಗ ಅದೇ ದ್ವೇಷ ಇಟ್ಟುಕೊಂಡು ಮಂಗಳೂರಿನಲ್ಲೇ ಬಾಂಬ್ ಸ್ಫೋಟಿಸಿ ಉಗ್ರರನ್ನು ಬೆಂಬಲಿಸಲು ಪ್ಲಾನ್ ಮಾಡಿದ್ದ. ಅಲ್ಲದೇ ಈ ಹಿಂದೆ ಮಂಗಳೂರಿನಲ್ಲಿ ಶಾರೀಖ್ ಮೇಲೆ ಎರಡು ಕೇಸ್ ಕೂಡ ದಾಖಲಾಗಿತ್ತು.
ಬಾಂಬ್ ಸ್ಫೋಟ ನಡೆಸಿದ ಆರೋಪಿ ಮಂಗಳೂರಿನಲ್ಲೇ ಶಿಕ್ಷಣ ಮುಗಿಸಿದ್ದರಿಂದ ಮಂಗಳೂರಿನ ಬಗ್ಗೆ ಸಾಕಷ್ಟು ಮಾಹಿತಿ ಇತ್ತು. ಜೊತೆಗೆ ಕೋಮು ಸೂಕ್ಷ್ಮ ಪ್ರದೇಶದಲ್ಲೇ ಆತಂಕ ಮೂಡಿಸಿ ಉಗ್ರರ ಗಮನ ಸೆಳೆಯಲು ಮಂಗಳೂರನ್ನೇ ಟಾರ್ಗೆಟ್ ಮಾಡಿಕೊಂಡಿರುವ ಸಾಧ್ಯತೆ ಇದೆ. ಸಂಜೆಯ ಹೊತ್ತಿನಲ್ಲಿ ಜನಸಂಖ್ಯೆ ದಟ್ಟಣೆಯಾಗುವ ಪ್ರದೇಶದಲ್ಲಿ ಬಾಂಬ್ ಸಿಡಿಸುವ ಹುನ್ನಾರವನ್ನು ಕೂಡ ನಡೆಸಿದ್ದ ಎನ್ನಲಾಗುತ್ತಿದೆ.
ಶಾರೀಖ್ ಗುರುತು ಪತ್ತೆಗೆ ಪೋಷಕರ ಆಗಮನ :
ಇದೀಗ ಬಾಂಬ್ ಬ್ಲಾಸ್ಟ್‌ನಲ್ಲಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಶಾರೀಖ್ ನ ಗುರುತನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಕಷ್ಟಕರವಾಗಿದೆ. ಆದ್ದರಿಂದ ಇಂದು ಆತನ ಕುಟುಂಬದವರು ಗುರುತು ಪತ್ತೆ ಹಚ್ಚಲು ಫಾದರ್ ಮುಲ್ಲರ್ ಆಸ್ಪತ್ರೆಗೆ ಧಾವಿಸಿದ್ದಾರೆ. ಕುಟುಂಬದವರು ದೃಡಪಡಿಸಿದ ನಂತರವಷ್ಟೇ ಆತ ಶಾರೀಖ್ ಹೌದಾ? ಆಥವಾ ಅಲ್ಲವಾ? ಎಂಬ ಮಾಹಿತಿ ಬಹಿರಂಗವಾಗಲಿದೆ.